Monday, December 23, 2024

ಮ್ಯಾಕ್ಸ್​ವೆಲ್-ಡುಪ್ಲೆಸಿಸ್ ಅಬ್ಬರ : ರಾಜಸ್ಥಾನಕ್ಕೆ 190 ರನ್ ಟಾರ್ಗೆಟ್

ಬೆಂಗಳೂರು : ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಅವರ ಸ್ಫೋಟಕ ಆಟದ ನೆರವಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ರಾಜಸ್ಥಾನ ತಂಡಕ್ಕೆ 190 ರನ್​ಗಳ ಟಾರ್ಗೆಟ್ ನೀಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 189 ರನ್‌ಗಳ ಮೊತ್ತ ಕಲೆಹಾಕಿದೆ. ರಾಜಸ್ಥಾನ ತಮಡ ಗೆಲ್ಲಲು 190 ರನ್ ಮಾಡಬೇಕಿದೆ.

ಆರ್​ಸಿಬಿ ಪರ ಡುಪ್ಲೆಸಿಸ್ (62) ಹಾಗೂ ಮ್ಯಾಕ್ಸ್‌ವೆಲ್ (77) ಸ್ಫೋಟಕ ಅರ್ಧಶತಕ ಗಳಿಸಿದರು. ಆದರೆ, ಒಬ್ಬರ ಹಿಂದೊಬ್ಬರು ಔಟಾದರು. ನಂತರ ಯಾರೂ ಉತ್ತಮವಾಗಿ ಆಡಲಿಲ್ಲ. ಹೀಗಾಗಿ ಆರ್​ಸಿಬಿ 200ರ ಗಡಿ ದಾಟಲಿಲ್ಲ.

ರಾಜಸ್ಥಾನ್ ತಂಡದ ಪರ ಬೋಲ್ಟ್ ಹಾಗೂ ಸಂದೀಪ್ ಶರ್ಮಾ ತಲಾ 2 ವಿಕೆಟ್, ಅಶ್ವಿನ್ ಮತ್ತು ಚಹಲ್ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ : RCBಗೆ ‘ವಿಜಯ’ ತಂದುಕೊಟ್ಟ ‘ಕನ್ನಡಿಗ ವಿಜಯ್’ : ಡೆಲ್ಲಿಗೆ ಸತತ 5ನೇ ಸೋಲು

ವಿರಾಟ್ ಕೊಹ್ಲಿ ಗೋಲ್ಡನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರಿಗೆ ರಾಜಸ್ಥಾನ್ ಬೌಲರ್ ಬೌಲ್ಟ್ ಬಿಗ್ ಶಾಕ್ ನೀಡಿದರು. ಮೊದಲ ಎಸೆತದಲ್ಲೇ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆದರು. ಬೌಲ್ಟ್ ಎಸೆತದಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯೂ ಆದರು. ಏನಾಯಿತು ಎಂದು ಅರಿಯುವ ಮೊದಲೇ ಕೊಹ್ಲಿ ಪೆವಿಲಿಯನ್ ಸೇರಿದರು. ಇದರಿಂದ ಆರ್​ಸಿಬಿ ಅಭಿಮಾನಿಗಳು ಆಘಾತಗೊಂಡರು.

RELATED ARTICLES

Related Articles

TRENDING ARTICLES