Thursday, April 3, 2025

ಇತಿಹಾಸ ಸೃಷ್ಟಿ : ಕೆಕೆಆರ್ ವಿರುದ್ಧ ಚೆನ್ನೈ ಬೃಹತ್ ಮೊತ್ತ

ಬೆಂಗಳೂರು : ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಇತಿಹಾಸ ಸೃಷ್ಟಿಸಿದೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 236 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ. ರಹಾನೆ, ದುಬೆ, ಕಾನ್ವೆ ಸಿಡಿಲಬ್ಬರದ ಅರ್ಧಶತಕಕ್ಕೆ ಕೋಲ್ಕತ್ತಾ ಬೌಲರ್ ಗಳು ಧೂಳಿಪಟವಾಗಿದ್ದಾರೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಪೈಕಿ ಚೆನ್ನೈ ಅತಿ ಹೆಚ್ಚು ರನ್ ಗಲಿಸಿದೆ. ಈ ಮೊದಲು ಮುಂಬೈ ತಂಡ 232/2 ರನ್ ಗಳಿಸಿದ್ದೇ ದಾಖಲೆಯಾಗಿತ್ತು. ಇದೀಗ ಚೆನ್ನೈ 235/4 ರನ್ ಗಳಿಸುವ ಮೂಲಕ ಮುಂಬೈ ದಾಖಲೆ ಮುರಿದಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಚೆನ್ನೈ, ಆರಂಭಿಕ ಬ್ಯಾಟರ್ ಡೇವನ್ ಕಾನ್ವೇ (56), ರಹಾನೆ ಅಜೇಯ 71*, ಶಿವಮ್ ದುಬೆ 50 ರನ್ ಗಳ ಅಬ್ಬರದ ಬ್ಯಾಟಿಂಗ್ ನೆರವಿನಿಂದ 200ರ ಗಡಿ ದಾಟಿತು. ರಹಾನೆ 5 ಸಿಕ್ಸರ್, 6 ಫೋರ್ ಸಿಡಿಸಿದರೆ, ದುಬೆ 5 ಸಿಕ್ಸ್ 2 ಬೌಂಡರಿ ಹೊಡೆದರು.

ಈ ಇಬ್ಬರ ಬ್ಯಾಟಿಂಗ್‌ಗೆ ಕೆಕೆಆರ್ ಬೌಲಿಂಗ್ ವಿಭಾಗ ಕಂಗಾಲಾಯಿತು. ಅಂತಿಮವಾಗಿ ಚೆನ್ನೈ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಕೆಕೆಆರ್ ಪರ ಕುಲ್ವಂತ್ 2 ವಿಕೆಟ್, ಸುಯಶ್ ಶರ್ಮಾ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ : ಆರ್​ಸಿಬಿಗೆ 7 ರನ್‌ಗಳ ರೋಚಕ ಜಯ, ಮ್ಯಾಕ್ಸ್​ವೆಲ್ ವಿಶೇಷ ದಾಖಲೆ

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಮಹೇಂದ್ರ ಸಿಂಗ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಮಥಿಸಾ ಪತಿರಾನ, ತುಷಾರ್ ದೇಶಪಾಂಡೆ, ಮನೀಶ್ ತೀಕ್ಷಣ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

ನಿತೀಶ್ ರಾಣಾ (ನಾಯಕ), ಜೇಸನ್ ರಾಯ್, ನಾರಾಯಣ್ ಜಗದೀಸನ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಡೇವಿಡ್ ವೀಸಾ, ಕುಲ್ವಂತ್ ಖೆಜ್ರೋಲಿಯಾ, ಸುಯಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

RELATED ARTICLES

Related Articles

TRENDING ARTICLES