Monday, December 23, 2024

ಹೇ.. ನಮ್ಗೆ ಖಾಸಗಿ ಲೈಫ್ ಇರಲ್ವಾ? ನಡೀರಿ.. : ಡಿಕೆಶಿ ಚಂಡಿಕಾಯಾಗ ಮಾಡಿಸಿದ್ದು ಏಕೆ?

ಬೆಂಗಳೂರು : ಚಂಡಿಕಾಯಾಗ ನಡೆಸಲು ಶೃಂಗೇರಿ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳ ಮೇಲೆ ಫುಲ್ ಗರಂ ಆಗಿದ್ದಾರೆ.

ನಮಗೆ ಖಾಸಗಿ ಬದುಕು ಇಲ್ವಾ? ನಡಿರಿ..ಕೆಲಸ ನೋಡಿಕೊಳ್ಳಿ. ಹೇ, ನಿಮಗೆ ಕೆಲಸ ಇಲ್ವೇನ್ರಪ್ಪಾ? ಯಾವನು? ಹೋಗಿ ಕೆಲಸ ನೋಡ್ಕೊಳ್ಳಿ ಎಂದು ಶ್ರೀಗಳ ಭೇಟಿಗೆ ಹೋಗುವ ಮುನ್ನ ಡಿಕೆಶಿ ಗರಂ ಆದರು.

ಶೃಂಗೇರಿಯಲ್ಲಿ ಡಿಕೆಶಿ ಕುಟುಂಬ ಚಂಡಿಕಾಯಾಗ ನಡೆಸಿದೆ. ಅಧಿಕಾರಕ್ಕಾಗಿ ರಾಜ-ಮಹಾರಾಜರು ಈ ಯಾಗ ನಡೆಸುತ್ತಿದ್ದರು. 10ಕ್ಕೂ ಹೆಚ್ಚು ಪುರೋಹಿತರಿಂದ ಯಾಗ ನಡೆದಿದೆ. 2018ರಲ್ಲಿ ದೇವೇಗೌಡರ ಕುಟುಂಬ 11 ದಿನ ಅತಿರುದ್ರ ಮಹಾಯಾಗ ನಡೆಸಿತ್ತು.

ಡಿಕೆಶಿಗೆ ಸ್ವಂತಕ್ಕೆ ಏನಿದೆ?

ಡಿ.ಕೆ ಶಿವಕುಮಾರ್ ಅವರ ಕುಟುಂಬದಿಂದ ಶೃಂಗೇರಿ ಪೀಠದಲ್ಲಿ ಚಂಡಿಕಾಯಾಗ ನಡೆದಿದೆ. ಈ ಬಗ್ಗೆ ಶೃಂಗೇರಿಯಲ್ಲಿ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಅವರು ಪ್ರತಿಕ್ರಿಯೆ ನೀಡಿದ್ದು, ಡಿಕೆಶಿಗೆ ಸ್ವಂತಕ್ಕೆ ಏನಿದೆ, ಪ್ರಜಾಕ್ಷೇಮವೇ ಅವರೇ ಬಾಳು, ಅದನ್ನೇ ಪ್ರಾರ್ಥಿಸಲು ಬಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಸಿದ್ದು-ಡಿಕೆಶಿ’ ಇಬ್ಬರನ್ನೂ ಜೈಲಿಗೆ ಹಾಕ್ತೀವಿ : ಕೆ.ಎಸ್ ಈಶ್ವರಪ್ಪ ಗುಡುಗು

ಚುನಾವಣೆಯಲ್ಲಿ ಯಾವ ಗಲಭೆಗಳಾಗದಿರಲಿ, ಎಲ್ಲರೂ ಚೆನ್ನಾಗಿರಲೆಂದು ಪ್ರಾರ್ಥಿಸಲು ಬಂದಿದ್ದಾರೆ. ಡಿಕೆಶಿ ಪೂಜೆಯಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಜ್ಯೋತಿಷ್ಯ ಕಲಿಯಲು ಕಲ್ಭಾಂದನಕ ಆಗುತ್ತೆ ಸಂವತ್ಸರ ಹೋದ್ರು ಆಗಲ್ಲ. ಶೃಂಗೇರಿ ಪೀಠದಲ್ಲಿ ಯಾರಿಗೂ, ಯಾವ ಕಟ್ಟುನಿಟ್ಟುಗಳಿಲ್ಲ. ಗುರುಗಳ ಅಪ್ಪಣೆ ಪಡೆದು ಯಾರು, ಯಾವ ಒಳ್ಳೆ ಕೆಲಸ ಬೇಕಾದರೂ ಮಾಡಬಹುದು ಎಂದು ದ್ವಾರಕಾನಾಥ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಶೃಂಗೇರಿಯ ಶ್ರೀ ಶಾರದಾ ಪೀಠವು ನಮ್ಮ ನಾಡಿನ ಪ್ರಮುಖ ಭಕ್ತಿ ಕೇಂದ್ರವಾಗಿದ್ದು, ಈ ಕ್ಷೇತ್ರಕ್ಕೆ ದು ಭೇಟಿ ನೀಡಿ ತಾಯಿ ಶಾರದೆಯ ದರ್ಶನ ಪಡೆದು ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES