Thursday, January 23, 2025

ಬಿಜೆಪಿಗೆ ಸೋಲಿನ ಭೀತಿ, ಗೂಳಿಹಟ್ಟಿ ಶೇಖರ್ ಬೆಂಬಲಿಗರ ಮೇಲೆ ಹಲ್ಲೆ

ಹೊಸದುರ್ಗ : ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಗೂಳಿಹಟ್ಟಿ ಶೇಕರ್ ಬೆಂಬಲಿಗರ ಮೇಲೆ ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.

ರಾಜಕೀಯ ದ್ವೇಷದಿಂದಾಗಿ ಎರಡು ಗುಂಪುಗಳ ಮಧ್ಯೆ ಚುನಾವಣೆಗೂ ಮುನ್ನವೇ ಮಾರಾಮಾರಿಯಾಗಿರುವ ಘಟನೆ ಚಿತ್ರದುರ್ಗ‌ ಜಿಲ್ಲೆ ಹೊಸದುರ್ಗ ತಾಲೂಕಿನ ಯಾದಗಟ್ಟ ಗ್ರಾಮದಲ್ಲಿ ನಡೆದಿದೆ. ಶ್ರೀರಾಂಪುರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಗಿರೀಶ್ ಮತ್ತು ಓಂಕಾರಪ್ಪ‌ ಎಂಬಿಬ್ಬರ  ಗುಂಪುಗಳ ನಡುವೆ ಘರ್ಷಣೆಯಾಗಿದೆ. ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಬೆಂಬಲಿಗನಾಗಿರುವ ಗಿರೀಶ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಲಿಂಗಮೂರ್ತಿ ಬೆಂಬಲಿಗನಾದ ಓಂಕಾರಪ್ಪ ಗುಂಪಿನ ಮದ್ಯೆ ಘರ್ಷಣೆಯಾಗಿದೆ.

ಕಳೆದ ಎರಡು ದಿನಗಳ‌ ಹಿಂದೆ ನಡೆದ ಗೂಳಿಹಟ್ಟಿ ಶೇಖರ್‌ನಾಮಪತ್ರ ಸಲ್ಲಿಕೆಯ ರೋಡ್ ಶೋ ಗೆ ಯದಗಟ್ಟ ಗ್ರಾಮದ ಲಿಂಗಾಯತ ಸಮುದಾಯದ ಯುವಕರನ್ನು ಕರೆತಂದಿದ್ದರು. ಹೀಗಾಗಿ ಆಕ್ರೋಶಗೊಂಡಿರುವ ಓಂಕಾರಪ್ಪನ ಗುಂಪು, ಗಿರೀಶ್ ಮನೆ ಬಳಿಗೆ ತೆರಳಿ ಹಲ್ಲೆ‌ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : ನನ್ನನ್ನು ಗೆಲ್ಲಿಸುವಂತೆ ‘ಕಣಿವೆ ಮಾರಮ್ಮ’ನಿಗೆ ಪ್ರಾರ್ಥಿಸಿದ್ದೇನೆ : ಗೂಳಿಹಟ್ಟಿ ಶೇಖರ್

ಈ ಗುಂಪು ಘರ್ಷಣೆ ವೇಳೆ ಓರ್ವ ವ್ಯಕ್ತಿಗೆ ಗಂಭೀರ ಗಾಯ ವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಮರುಳಪ್ಪ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಗಾಯಾಳು ಮರುಳಪ್ಪ, ಗೂಳಿಹಟ್ಟಿ ಶೇಖರ್ ಬೆಂಬಲಿಗ‌ ಗಿರೀಶ್ ಅವರ ತಂದೆಯಾಗಿದ್ದಾರೆ.

ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ

ಹೊಸದುರ್ಗದಲ್ಲಿ ಎರಡು ಗುಂಪುಗಳ ಮಾರಾಮಾರಿ ಹಿನ್ನೆಲೆ ಹೊಸದುರ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಅವರು ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲಿನಿಂದಲೂ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಹೀಗೆ ತಂತ್ರ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರೊಂದಿಗೆ ಮಾತನಾಡಿ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES