ಬೆಂಗಳೂರು : ಟ್ವಿಟರ್ ಇಂದು ವಿಶ್ವದ ಹಲವು ಸ್ಟಾರ್ ಗಳಿಗೆ ಬಿಗ್ ಶಾಕ್ ನೀಡಿದೆ. ಈ ಹಿಂದೆ ವೆರಿಫೈಡ್ ಅಂತ ನೀಡಿದ್ದ ಬ್ಲೂ ಟಿಕ್ ಅನ್ನು ಇಂದಿನಿಂದ ತೆಗೆದು ಹಾಕಿದೆ.
ಹೌದು, ಇದು ಎಲ್ಲಾ ಟ್ವಿಟರ್ ಬಳಕೆದಾರರಿಗೂ ಅನ್ವಯವಾಗುತ್ತಿದ್ದು, ಇನ್ನು ಮುಂದೆ ಶುಲ್ಕ ಪಾವತಿಸಿದರೆ ಮಾತ್ರ ಬ್ಲೂ ಟಿಕ್ ನೀಡಲಾಗುತ್ತಿದೆ. ನಟ, ನಟಿ, ರಾಜಕೀಯ ಪ್ರಮುಖರು, ಕ್ರೀಡಾಪಟುಗಳು, ಮುಂತಾದವರ ಟ್ವಿಟರ್ ಪ್ರೊಫೈಲ್‌ನಲ್ಲಿದ್ದ ಬ್ಲೂ ಟಿಕ್ ತೆಗೆದು ಹಾಕಲಾಗಿದೆ.
ಕಳೆದ ರಾತ್ರಿಯಿಂದಲೇ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಸಿನಿಮಾ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಯಶ್ ಸೇರಿದಂತೆ ಹಲವರ ಟ್ವಿಟರ್ ಪ್ರೊಫೈಲ್‌ನಲ್ಲಿದ್ದ ಬ್ಲೂ ಟಿಕ್ ತೆಗೆಯಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಟ್ವಿಟ್ಟರ್ ಖಾತೆ ಬ್ಲಾಕ್
ಟ್ವಿಟ್ಟರ್‌ನ ಎಲಾನ್ ಮಸ್ಕ್ ಖರೀದಿಸುವ ಮುನ್ನ ಭಾರತೀಯ ಬಳಕೆದಾರರಿಗೆ ಆ ಮೈಕ್ರೋಬ್ಲಾಗಿಂಗ್ ಸೈಟ್ ಉಚಿತವಾಗಿ ಬ್ಲೂ ಟಿಕ್ ನೀಡಿತ್ತು. ಟ್ವೀಟರ್‌ಅನ್ನು ಎಲಾನ್ ಮಸ್ಕ್ ಖರೀದಿಸಿದಾಗಿನಿಂದಲೂ ನಿಯಮಗಳನ್ನು ಬದಲಾಯಿಸುತ್ತಲೇ ಇದ್ದಾನೆ. ಆದರೆ, ಇದೀಗ ಬ್ಲೂಟಿಕ್ ಬೇಕೆನಿಸಿದರೆ ಹಣ ಕಟ್ಟಲೇಬೇಕು. ಸಬ್ ಸ್ಕ್ರೈಬ್ ಮಾಡಿಕೊಳ್ಳದವರ ಖಾತೆಯ ಬ್ಲೂಟಿಕ್ ತೆಗೆದು ಹಾಕುವುದಾಗಿ ಟ್ವೀಟರ್ ಹೇಳಿಕೆ ನೀಡಿತ್ತು. ಆದರೆ, ಟ್ವಿಟ್ಟರ್ ಆ ಕೆಲಸವನ್ನು ಈಗ ಮಾಡಿದೆ.
ನಟ, ನಟಿ, ರಾಜಕೀಯ ಪ್ರಮುಖರು, ಕ್ರೀಡಾಪಟುಗಳು, ಮುಂತಾದವರಿಗೆ ಟ್ವಿಟ್ಟರ್ ನಲ್ಲಿ ನೀಲಿ ಬಣ್ಣದ ಗುರುತು ಇರೋದು ಎಲ್ಲರಿಗೂ ತಿಳಿದಿರುಚವ ವಿಷಯ. ಸಾಮಾನ್ಯವಾಗಿ ಟ್ವಿಟ್ಟರ್ ನಲ್ಲಿ ಈ ಬ್ಲೂ ಟಿಕ್ ಇದ್ದರೆ ಅವರು ಸೆಲಿಬ್ರಿಟಿಗಳೆ ಅಂತಾನೇ ಹೇಳಲಾಗುತ್ತದೆ. ಆದರೆ, ಇದೀಗ ಇವರಿಗೆಲ್ಲ ಟ್ವಿಟ್ಟರ್‌ಶಾಕ್ ನೀಡಿದೆ.