Wednesday, January 22, 2025

ಅಂಕಲ್ ‘ಸಿಎಂ ಆಗೋಕೆ ಏನು ಮಾಡ್ಬೇಕು’ : ಬಾಲಕನ ಪ್ರಶ್ನೆಗೆ ಸೋಮಣ್ಣ ತಬ್ಬಿಬ್ಬು

ಬೆಂಗಳೂರು : ಅತ್ತ ವರುಣಾ, ಇತ್ತ ಚಾಮರಾಜನಗರದಲ್ಲಿ ಮತಬೇಟೆ. ಎರಡು ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿರುವ ವಸತಿ ಸಚಿವ ವಿ. ಸೋಮಣ್ಣ ಇಂದು ಬಾಲಕನೋರ್ವ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ.

ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿರುವ ಸಚಿವ ಸೋಮಣ್ಣ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಶುಕ್ರವಾರ ಮುಂಜಾನೆಯಿಂದಲೇ ಸೋಮಣ್ಣ ಮತ ಬೇಟೆ ಆರಂಭಿಸಿದ್ದಾರೆ. ಈ ವೇಳೆ ಬಾಲಕನೊಬ್ಬ, ‘ಅಂಕಲ್, ಸಿಎಂ ಆಗಲು ಏನು ಮಾಡಬೇಕು?’ ಅಂತ ಸೋಮಣ್ಣ ಅವರನ್ನು ಪ್ರಶ್ನಿಸಿದ್ದಾನೆ.

ಹಣೆಯಲ್ಲಿ ಬರೆದಿದ್ರೆ ಆಗ್ತೀಯಾ!

ಬಾಲಕನ ಮಾತಿಗೆ ಸೋಮಣ್ಣ ಕಕ್ಕಾಬಿಕ್ಕಿಯಾಗಿದ್ದಾರೆ. ‘ನೀನು ಏನು ಮಾಡಬೇಡಾ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ-ಗಿಎಂ ಎಲ್ಲಾ ಲೆಕ್ಕ ಇಲ್ಲ. ನೀನೆ ದೊಡ್ಡ ಸಿಎಂ. ನೋಡಪ್ಪಾ, ನೀನು ಚೆನ್ನಾಗಿ ಓದು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇರಲಿ. ಉಳಿದ ವಿಷಯವನ್ನೇಲ್ಲಾ ಬಿಟ್ಟು ಬಿಡು. ನಿನ್ನ ಹಣೆಯಲ್ಲಿ ಬರೆದಿದ್ದರೇ ಮುಖ್ಯಮಂತ್ರಿ ಆಗುತ್ತೀಯಾ ಎಂದು ಬಾಲಕನಿಗೆ ಸೋಮಣ್ಣ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಪತ್ನಿ ವನಜಾ ಹುಟ್ಟುಹಬ್ಬ ಆಚರಿಸಿದ ಬಿ.ಸಿ ಪಾಟೀಲ್

ಸಚಿವ ವಿ. ಸೋಮಣ್ಣ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಚಾಮರಾಜನಗರದ ವಿವಿಧೆಡೆ ಇಂದು ಮತಯಾಚಿಸಿದ್ದಾರೆ. ಉದ್ಯಾನವನ, ಹೋಟೆಲ್​, ಅಂಗಡಿಗಳ ಬಳಿ ತೆರಳಿ ಪ್ರಚಾರ ನಡೆಸಿದ್ದಾರೆ.

ಇಂದು 18ಕ್ಕೂ ಹೆಚ್ಚು ಗ್ರಾಮಗಳಿಗೆ ಸೋಮಣ್ಣ ಭೇಟಿ ಕೊಡಲಿದ್ದಾರೆ. ಇದರ ಜೊತೆ, ಸಮುದಾಯದ ಮುಖಂಡರನ್ನು ಸಚಿವ ಸೋಮಣ್ಣ ಭೇಟಿಯಾಗಿ ಬಿಜೆಪಿಗೆ ಹಾಗೂ ತಮ್ಮ ಗೆಲುವಿಗೆ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES