Thursday, January 23, 2025

ಹೈದರಾಬಾದ್ ಸುಲಭ ತುತ್ತು : ಚೆನ್ನೈಗೆ 7 ವಿಕೆಟ್ ಗಳ ಭರ್ಜರಿ ಗೆಲುವು

ಬೆಂಗಳೂರು : ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಎಂ.ಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಹೈದರಾಬಾದ್ ಸುಲಭ ತುತ್ತಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತ್ತು. ಹೈದರಾಬಾದ್ ನೀಡಿದ ಸುಲಭ ಟಾರ್ಗೆಟ್ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಡೆವೊನ್ ಕಾನ್ವೆ ಅಜೇಯ 77* ರನ್, ಋತುರಾಜ್ ಗಾಯಕ್ವಾಡ್ 35, ಅಜಿಂಕ್ಯಾ ರಹಾನೆ 9 ರನ್ ಗಳಿಸಿದರು. ಹೈದರಾಬಾದ್ ಪರ ಮಯಾಂಕ್ ಮಾರ್ಕಂಡೆ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಕಿಂಗ್’ ಕೊಹ್ಲಿ ‘ದರ್ಬಾರ್ ‘ : ಹೊಸ ದಾಖಲೆ ನಿರ್ಮಾಣ

ಚೆನ್ನೈ ದಾಳಿಗೆ ತಿಣುಕಾಡಿದ ಹೈದರಾಬಾದ್

ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಿಣುಕಾಡಿದೆ. ಅಭಿಷೇಕ್ ಶರ್ಮಾ 34 ರನ್ ಗಳಿಸಿದ್ದೇ ಹೈದರಾಬಾದ್ ಪರ ಗರಿಷ್ಠ ಮೊತ್ತ. ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಅಂತಿಮವಾಗಿ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 134 ರನ್ ಕಲೆಹಾಕಿ, ಚೆನ್ನೈಗೆ 135 ರನ್‌ಗಳ ಸಾಧಾರಣ ಗುರಿ ನೀಡಿತ್ತು. ಚೆನ್ನೈ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದರು. ಆಕಾಶ್ ಸಿಂಗ್, ಮಹೀಶ್ ತೀಕ್ಷಣ ಮತ್ತು ಮಥೀಶ ಪಥಿರಣ ತಲಾ 1 ವಿಕೆಟ್ ಪಡೆದು ಜಡ್ಡುಗೆ ಸಾಥ್ ನೀಡಿದರು.

RELATED ARTICLES

Related Articles

TRENDING ARTICLES