ಬೆಂಗಳೂರು : ಐಪಿಎಲ್ 2023ರ ಪ್ಲೇ ಆಪ್ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟ ಮಾಡಿದೆ.
ಮೇ 23ರಿಂದ ಮೇ 28ರವರೆಗೆ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಮೇ 28ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ನಡೆಯಲಿದೆ ಎನ್ನಲಾಗಿತ್ತು. ಇದೀಗ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಬಾರಿಯ ಐಪಿಎಲ್ ಫೈನಲ್ ಪಂದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ : ತಲಾ ಧೋನಿ ಹೊಸ ಮೈಲುಗಲ್ಲು : ಈ ಸಾಧನೆ ಮಾಡಿದ ಮೊದಲ ನಾಯಕ ಇವರೇ!
🚨 NEWS 🚨
BCCI Announces Schedule and Venue Details For #TATAIPL 2023 Playoffs And Final.
Details 🔽https://t.co/JBLIwpUZyf
— IndianPremierLeague (@IPL) April 21, 2023
ಪ್ಲೇ ಆಫ್-ಫೈನಲ್ ವೇಳಾಪಟ್ಟಿ
- ಮೇ 23-ಕ್ವಾಲಿಫೈಯರ್ 1 ಪಂದ್ಯ-ಚೆನ್ನೈ ಕ್ರೀಡಾಂಗಣ
- ಮೇ 24-ಎಲಿಮಿನೇಟರ್ ಪಂದ್ಯ-ಚೆನ್ನೈ ಕ್ರೀಡಾಂಗಣ
- ಮೇ 26-ಕ್ವಾಲಿಫೈಯರ್ 2 ಪಂದ್ಯ-ಅಹಮದಾಬಾದ್ ಕ್ರೀಡಾಂಗಣ
- ಮೇ 28-ಫೈನಲ್-ಕ್ವಾಲಿಫೈಯರ್ 1 ರ ವಿಜೇತರು ಹಾಗೂ ಕ್ವಾಲಿಫೈಯರ್ 2 ರ ವಿಜೇತರ ನಡುವೆ-ಅಹಮದಾಬಾದ್ ಕ್ರೀಡಾಂಗಣ