Monday, December 23, 2024

ತಲೆನೋವು ನಿವಾರಿಸಲು ನೈಸರ್ಗಿಕ ಸರಳವಾದ ಮನೆಮದ್ದು.

ತಲೆನೋವು ಎಂಬುವುದು ಸಾಮೂನ್ಯ ಸಮಸ್ಯೆಯಾಗಿದ್ದರೂ ಇದರಿಂದ ಉಂಟಾಗುವ ನೋವು ಮಾತ್ರ ಹೇಳತೀರದು. ಈ ತೊಂದರೆ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಎಲ್ಲರೂ ತಲೆನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದರಿಂದ ಮುಂದೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆನೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವಿಗೆ ಮನೆಮದ್ದುಗಳ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು.

1. ನಿಂಬೆ ಮತ್ತು ಬಿಸಿ ನೀರು:

ಒಂದು ಲೋಟ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ವಿಶ್ರಣ ಮಾಡಬೇಕು. ಈ ವಿಶ್ರಣ ನೀರನ್ನು ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಏಕೆಂದರೆ ಕೆಲವೊಮ್ಮೆ ಹೊಟ್ಟೆಯ ಗ್ಯಾಸ್​ ಸಮಸ್ಯೆಯಿಂದ ಕೂಡ ತಲೆನೋವು ಕಾಣಿಸಿಕೊಂಡಿರುತ್ತದೆ.

2. ತುಳಸಿ ಮತ್ತು ಶುಂಠಿ:

ತುಳಸಿ ಮತ್ತು ಶುಂಠಿಯನ್ನು ಬಳಸಿ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ತುಳಸಿ ಎಲೆಗಳನ್ನು ಮತ್ತು ಶುಂಠಿ ರಸವನ್ನು ಮಿಶ್ರಣ ಮಾಡಬೇಕು. ನಂತರ ಇದನ್ನು ಹಣೆಯ ಮೇಲೆ ಇರಿಸಿದರೆ ತಲೆನೋವು ಕಡಿಮೆಯಾಗುತ್ತದೆ.

3. ಲವಂಗ ಮತ್ತು ಉಪ್ಪು:

ಲವಂಗ ಮತ್ತು ಉಪ್ಪಿನ ಮಿಶ್ರಣವನ್ನು ಸಿದ್ಧಪಡಿಸಬೇಕು. ಈ ಮಿಶ್ರಣವನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ. ಉಪ್ಪಿನಲ್ಲಿರುವ ಹೈಗ್ರಾಕೊಪಿಕ್​ ಅಂಶಗಳು ತಲೆನೋವಿಗೆ ಪರಿಣಾಮಕಾರಿಯಾಗಿ ಫಲಿಸುತ್ತದೆ. ಹೀಗಾಗಿ ಈ ಮನೆಮದ್ದನ್ನು ಬಳಸಿ ಶೀಘ್ರದಲ್ಲೇ ತಲೆನೋವನ್ನು ನಿವಾರಿಸಿಕೊಳ್ಳಬಹುದು.

5. ಶುಂಠಿ ಪೇಸ್ಟ್​:

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ತಲೆನೋವಿಗೆ ಶುಂಠಿ ಕಾಫಿ ಅತ್ಯುತ್ತಮ ಮನೆಮದ್ದು. ಅದೇ ರೀತಿ ಇತರೆ ಸಮಯದಲ್ಲಿ ಉಂಟಾಗುವ ತಲೆನೋವಿಗೆ ಪರಿಹಾರವಾಗಿ ಶುಂಠಿ ಪೇಸ್ಟ್​ ಅನ್ನು ಬಳಸಿಕೊಳ್ಳಬಹುದು. ಶುಂಠಿಯನ್ನು ಅರೆದು, ಅದನ್ನು ಸ್ವಲ್ಪ ನೀರಿನೊಂದಿಗೆ ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.

RELATED ARTICLES

Related Articles

TRENDING ARTICLES