Wednesday, January 22, 2025

ಮಂಡ್ಯದಲ್ಲಿ ‘ಅಶೋಕ್ ಜಯರಾಮ್ ಅವರದ್ದೇ ಗೆಲುವು’ : ಸುಮಲತಾ ಅಂಬರೀಶ್

ಬೆಂಗಳೂರು : ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಬಿಜೆಪಿ ಅಭ್ಯರ್ಥಿಯಾಗಿ ಇಂದು ಅಶೋಕ್ ಜಯರಾಮ್ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಸದೆ ಸುಮಲತಾ ಅವರು ಸಾಥ್ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸುಮಲತಾ ಅಂಬರೀಶ್, ಅಶೋಕ್ ಜಯರಾಮ್ ಅವರ ಜೊತೆ ತೆರಳಿ ಅವರ ನಾಮಪತ್ರವನ್ನು ಸಲ್ಲಿಸಿದ್ದೇವೆ. ಈ ಬಾರಿ ಮಂಡ್ಯದಲ್ಲಿ ಜನರು ಬದಲಾವಣೆಯನ್ನು ಬಯಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಶೋಕ್ ಜಯರಾಮ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ‘ಕೈ’ ನಾಯಕರು

ಮಂಡ್ಯದಲ್ಲಿ ಈಗ ಬಿಜೆಪಿಯ ಪರ ಒಲವು ಹೆಚ್ಚಿದೆ. ಮಂಡ್ಯದಲ್ಲಿ ಇಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಖಂಡಿತವಾಗಿ ಈ ಬಾರಿ ಬಿಜೆಪಿಗೆ ಮಂಡ್ಯದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ ಎನ್ನುವ ಮೂಲಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಶೋಕ್‌ ಮಂಡ್ಯದ ಮನೆ ಮಗ

ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಸ್ವಾರ್ಥದ ರಾಜಕಾರಣದಿಂದ ಮಂಡ್ಯದ ಅಭಿವೃದ್ಧಿ ಕುಂಟಿತವಾಗಿದೆ. ಇವರಿಮದ ಬೇಸತ್ತಿರುವ ಮಂಡ್ಯದ ಸ್ವಾಭಿಮಾನಿ ಜನತೆ ಈ ಬಾರಿ ಜನಪರವಾಗಿರುವ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.

ಮಂಡ್ಯ ಜನತೆಯ ಆಶೀರ್ವಾದದೊಂದಿಗೆ ನಮ್ಮ ಮಂಡ್ಯದ ಮನೆ ಮಗ ಅಶೋಕ್‌ ಜಯರಾಮ್ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES