Monday, January 20, 2025

ಬಿಗ್ ಶಾಕ್ : ಘೋಷಣೆಯಾಗಿದ್ದ ಅಭ್ಯರ್ಥಿಗಳ ಬದಲಾವಣೆ ಮಾಡಿದ ಜೆಡಿಎಸ್

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಇಂದು ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಹಲವು ಜೆಡಿಎಸ್ ನಾಯಕರಿಗೆ ಶಾಕ್ ನೀಡಿದೆ.

ಹೌದು, ಈ ಹಿಂದೆ ಘೋಷಣೆಯಾಗಿದ್ದ ಪಕ್ಷದ ಅಭ್ಯರ್ಥಿಗಳನ್ನು ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದೆ. ಅಲ್ಲದೆ, ಇತ್ತೀಚೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ನಾಯಕರಿಗೆ ಟಿಕೆಟ್ ಘೋಷಿಸಿದೆ. ಇನ್ನೂ ನಂಜನಗೂಡು ಸೇರಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಬಾಹ್ಯ ಬೆಂಬಲ ಘೋಷಿಸಿದೆ.

ಘೋಷಣೆಯಾಗಿದ್ದ ಪಕ್ಷದ ಅಭ್ಯರ್ಥಿಗಳ ಬದಲಾವಣೆ ಪಟ್ಟಿ

ಬಸವನಗುಡಿ-ಸೋಮನಗೌಡ ಪಾಟೀಲ್ ( ಪರಮಾನಂದ ಬಸಪ್ಪ ತನಿಖೆದಾರ್)..

ಬಸವಕಲ್ಯಾಣ-ಸಂಜಯ್ ವಾಡೇಕರ್ ( ಸೈಯದ್ ಯಶ್ರಬ್ ಆಲಿ ಖಾದ್ರಿ)..

ಬೀದರ್-ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ ಪಾಟೀಲ್ ಸೋಲಾಪುರ)..

ಕುಷ್ಟಗಿ-ಶರಣಪ್ಪ ಕುಂಬಾರ (ತುಕರಾಂ ಸುರ್ವೆ)

ಹಗರಿಬೊಮ್ಮನಹಳ್ಳಿ-ನೇಮಿರಾಜ ನಾಯ್ಕ್ (ಪರಮೇಶ್ವರಪ್ಪ)

ಬಳ್ಳಾರಿ ನಗರ-ಅನಿಲ್ ಲಾಡ್ (ಅಲ್ಲಾಭಕ್ಷ ಮುನ್ನಾ)

ಚನ್ನಗಿರಿ-ತೇಜಸ್ವಿ ಪಟೇಲ್(ಎಂ. ಯೋಗೇಶ್)

ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ (ಬಿ.ಬಿ.ನಿಂಗಯ್ಯ)

ರಾಜಾಜಿನಗರ-ಡಾ. ಅಂಜನಪ್ಪ (ಗಂಗಧಾರ ಮೂರ್ತಿ)

ಬೆಂಗಳೂರು ದಕ್ಷಿಣ-ರಾಜಗೋಪಾಲರೆಡ್ಡಿ (ಆರ್ ಪ್ರಭಾಕರ್ ರೆಡ್ಡಿ)

ಮಂಡ್ಯ-ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್)

ವರುಣಾ-ಡಾ. ಭಾರತಿ ಶಂಕರ್ (ಅಭಿಷೇಕ್)

ಇದನ್ನೂ ಓದಿ : ಕಾಂಗ್ರೆಸ್​ಗೆ ‘ಕೈ’ ಕೊಟ್ಟು ಜೆಡಿಎಸ್ ಸೇರಿದ ರಾಜಗೋಪಾಲರೆಡ್ಡಿ

ಬಾಹ್ಯ ಬೆಂಬಲ ಸೂಚಿಸಿರುವ ಇತರ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ

ಗುಲಬರ್ಗಾ ಗ್ರಾಂಮಾಂತರ-ಸಿಪಿಐ(ಎಂ) ಅಭ್ಯರ್ಥಿಗೆ ಬೆಂಬಲ

ಬಾಗೆಪಲ್ಲಿ-ಸಿಪಿಐ(ಎಂ) ಅಭ್ಯರ್ಥಿಗೆ ಬೆಂಬಲ..

ಕೆ.ಆರ್.ಪುರಂ-ಸಿಪಿಐ(ಎಂ) ಅಭ್ಯರ್ಥಿಗೆ ಬೆಂಬಲ

ಸಿ.ವಿ.ರಾಮನ್ ನಗರ-ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ

ವಿಜಯನಗರ-ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ

ಮಹದೇವಪುರ-ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ

ನಂಜನಗೂಡು-ದರ್ಶನ್ ಧ್ರುವನಾರಯಣಗೆ ಬೆಂಬಲ

RELATED ARTICLES

Related Articles

TRENDING ARTICLES