Sunday, January 19, 2025

ಶಿಗ್ಗಾವಿಯಲ್ಲಿಂದು ಸಿಎಂ ಪರ ಪ್ರಚಾರಕ್ಕೆ ಕಿಚ್ಚ ಸುದೀಪ್​ ಸಾಥ್​

ಶಿಗ್ಗಾವಿ: ಕರುನಾಡ ಕುರುಕ್ಷೇತ್ರದಲ್ಲಿ ನಾಮಿನೇಷನ್​​ ಜಾತ್ರೆ ಜೋರಾಗಿದ್ದು, ಇಂದು ತವರುಕ್ಷೇತ್ರದಿಂದ ಕಣಕ್ಕೆ ಇಳಿದ್ದು ನಾಮಪತ್ರ ಸಲ್ಲಿಸಲಿರುವ ಸಿಎಂ ಬೊಮ್ಮಾಯಿಗೆ ಇಂದು ಕಿಚ್ಚ ಸುದೀಪ್​ ಸಾಥ್​ ನೀಡಲಿದ್ದಾರೆ.
ಹೌದು, ಇಂದು ಶಿಗ್ಗಾವಿಯಲ್ಲಿ ನಾಮಪತ್ರಸಲ್ಲಿಸಲಿರುವ ಸಿಎಂ ಬೊಮ್ಮಾಯಿ ಬೃಹತ್​ ಮೆರಮಣಿಗೆ ಮೂಲಕ ಪ್ರಚಾರಕ್ಕಿಳಿಯಲಿದ್ದು,ಅವರೇ ಸಾಥ್​ ನೀಡಲು ನಟ ಸುದೀಪ್ ಆಗಮಿಸಲಿದ್ದಾರೆ.
ಇನ್ನೂ ನಟ ಸುದೀಪ್ (Kiccha Sudeep) ಹಲವು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಪರವಾಗಿ ಮತ್ತು ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಮಾತು ಕೊಟ್ಟಂತೆ ಇಂದು ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ.
 ಸಿಎಂ ಪರವಾಗಿ ಪ್ರಚಾರ ಮಾಡಲು ನಟ ಸುದೀಪ್ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ, ಬಳಿಕ ಸಿಎಂ ಜೊತೆ ಶಿಗ್ಗಾವಿಯಲ್ಲಿ ಅವರು ಬೆಳಗ್ಗೆ 10.50ಕ್ಕೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.ಪ್ರಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ,ಪಿ.ನಡ್ದಾ ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸದ್ಯ ಬೊಮ್ಮಾಯಿ ಪರವಾಗಿ ಪ್ರಚಾರಕ್ಕೆ ಹೋಗುವ ಕಿಚ್ಚ ಮುಂದಿನ ದಿನಗಳಲ್ಲಿ ಯಾರೆಲ್ಲ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

RELATED ARTICLES

Related Articles

TRENDING ARTICLES