ಹುಬ್ಬಳ್ಳಿ : ಬಿ.ಎಲ್ ಸಂತೋಷ್ ತಮ್ಮ ಮಾನಸ ಪುತ್ರನಿಗೆ ತೋರಿಸೋ ಪ್ರೀತಿಯಲ್ಲಿ ನನಗೆ ಒಂದು ಪರ್ಸೆಂಟ್ ಪ್ರಿತಿ ತೋರಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ಎಲ್ ಸಂತೋಷ್ ಅವರಿಗೆ ಒಂದೇ ಹೇಳೋದು. ನಿಮ್ಮ ಮಾನಸ ಪುತ್ರನಿಗೆ ತೋರಿಸೋ ಪ್ರೀತಿ ನನಗೆ ಒಂದು ಪರ್ಸೆಂಟ್ ತೋರಸಬೇಕಿತ್ತು. ಬಿಜೆಪಿಯಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಶುರುವಾಗಿದೆ ಎಂದು ಕುಟುಕಿದ್ದಾರೆ.
ಬಿ.ಎಲ್.ಸಂತೋಷ್ರನ್ನು ಕೇರಳದ ಉಸ್ತುವಾರಿಯಾಗಿ ಮಾಡಿದ್ದರು. ಸಂತೋಷ್ ಉಸ್ತುವಾರಿಯಾಗಿದ್ದಾಗ ಕೇರಳದಲ್ಲಿ ಒಂದು ಸ್ಥಾನವೂ ಬರಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಗೆ 2 ರಿಂದ 3 ಸ್ಥಾನ ಬಂತು ಅಷ್ಟೇ. ಇವತ್ತು ಕರ್ನಾಟಕದಲ್ಲಿ ಬಿ.ಎಲ್.ಸಂತೋಷ್ ಕಾರಬಾರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ತಾಕತ್ತಿದ್ರೆ ‘ಲಿಂಗಾಯತರನ್ನ ಸಿಎಂ’ ಅಭ್ಯರ್ಥಿಯಾಗಿ ಘೋಷಿಸಲಿ : ಕಟೀಲ್ ಸವಾಲು
ಇದು ನನ್ನ ಕೊನೆ ಚುನಾವಣೆ
ಬಿಜೆಪಿಯೊಳಗಿನ ವೇದನೆಯನ್ನು ಸಹಿಸಕೊಂಡರೆ ಜಗದೀಶ್ ಶೆಟ್ಟರ್ ಅವರಿಗೆ ಮಾನ ಮರ್ಯಾದೆ ಇಲ್ಲ ಅಂತ ಕಾಣ್ತಾರೆ. ನಾನು 70 ವರ್ಷ ಆದ ಮೇಲೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ನನ್ನ ಕೊನೆ ಚುನಾವಣೆ. ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಜಗದೀಶ್ ಶೆಟ್ಟರ್ ಭಾವುಕರಾಗಿದ್ದಾರೆ.
ನನ್ನನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೇನೆ. ಬಿಜೆಪಿ ಪಕ್ಷ ನಶಿಸಿ ಹೋಗುತ್ತಿದೆ. ಪಕ್ಷವನ್ನು ಮುಗಿಸಲು ಕಾಯುತ್ತಿದ್ದಾರೆ. ಬಿ.ಎಲ್ ಸಂತೋಷ್ ಜೊತೆ ಒಂದೊಂದೆ ಹೆಸರು ಹೊರ ಬರುತ್ತದೆ ಎಂದು ಜಗದೀಶ್ ಶೆಟ್ಟರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.