Saturday, January 11, 2025

ಆಡುತ್ತಿದ್ದಾಗ ಕಬ್ಬಿಣದ ಪೈಪ್​ ಒಳಗೆ ಸಿಲುಕಿದ ಮಗುವಿನ ಕೈ..!

ಬೆಂಗಳೂರು: ನೀವು ಮಕ್ಕಳ ಬಗ್ಗೆ ಒಂದು ನಿಮಿಷ ಗಮನವರಿಸಿಲ್ಲ ಅಂದ್ರೆ ನಿಮ್ಮ ಮನೆಯಲ್ಲೂ ಇಂತಹದ್ದೇ ಘಟನೆ ನಡೆಯಬಹುದು. ಇನ್ನೂ ಮಕ್ಕಳು ಆಟವಾಡುತ್ತೀರುವ ಪೋಷಕರು ಅವರ ಮೇಲೆ ಒಂದು ಕಣ್ಣಿಟ್ಟಿರಬೇಕು. ಇಲ್ಲವಾದರೆ ನಿಮ್ಮ ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ಹೌದು, ಬೆಂಗಳೂರಿನ ಡೈರಿ ಕಾಲೋನಿಯ ಶಿವನ ದೇವಸ್ಥಾನದಲ್ಲಿ ಆಡುಗೋಡಿ ನಿವಾಸಿ ಲೋಕೇಶ್ ಎಂಬುವರ ಮಗು ಸಚ್ಚು ಆಟವಾಡುವಾಗ ಕಬ್ಬಿಣದ ಪೈಪ್ ಒಳಗೆ ಕೈ ಹಾಕಿರುವ ಘಟನೆ ನಡೆದಿದೆ.

ಇಂದು ಸಂಜೆ ಲೋಕೇಶ್ ದಂಪತಿ ತನ್ನ ಒಂದೂವರೆ ವರ್ಷದ ಮಗು ಸಚ್ಚುವಿನೊಂದಿಗೆ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಮಗುವನ್ನ ದೇವಸ್ಥಾನದ ಆವರಣದಲ್ಲಿ ಆಟವಾಡಲು ಬಿಟ್ಟಿದ್ದರು. ಹೀಗೆ ಆಡುತ್ತಿದ್ದ ಸಚ್ಚು ಕಂಬ ನೆಡಲು ಅಳವಡಿಸಿದ್ದ ಕಬ್ಬಿಣದ ಪೈಪ್​ನೊಳಗೆ ಕೈ ಇಟ್ಟಿದೆ. ಮಗುವಿನ ಕೈಯಲ್ಲಿ ಬೆಳ್ಳಿ ಕಡಗ ಇದ್ದಿದ್ದರಿಂದ ಪೈಪ್​ನೊಳಗೆ ಸಿಲುಕಿಕೊಂಡಿದೆ. ಸುಮಾರು ಒಂದೂವರೆ ಅಡಿ ಉದ್ದದ ಪೈಪ್​ನೊಳಗೆ ಸಿಲುಕಿದೆ.

ಇನ್ನು, ಮಗುವಿನ ಕೈ ಕಬ್ಬಿಣದ ಪೈಪ್ ಒಳಗೆ ಸಿಲುಕಿದ್ದನ್ನು ನೋಡಿದ ಸ್ಥಳದಲ್ಲಿದ್ದ ಟ್ರಾಫಿಕ್ ಕಾನ್​ಸ್ಟೇಬಲ್ ಹನುಮಂತ್ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದೆ. ಅದರಂತೆ ಮಣ್ಣನ್ನು ಅಗೆದು ಕಬ್ಬಿಣದ ಪೈಪ್ ಕಟ್ ಮಾಡಿ ಮಗುವಿನ ಕೈ ಹೊರತೆಗೆಯಲಾಯಿತು. ಸುಮಾರು ಎರೆಡು ಗಂಟೆಗಳ ಕಾಲ ಹರಸಾಹಸ ಪಟ್ಟು ಮಗುವಿನ ಕೈ ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾದರು.

RELATED ARTICLES

Related Articles

TRENDING ARTICLES