Monday, December 23, 2024

ಚುನಾವಣೆಗೆ ಸ್ಪರ್ಧಿಸಲು ಗೌರಿಶಂಕರ್​ಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ನವದೆಹಲಿ: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಶಾಸಕ ಡಿಸಿ ಗೌರಿಶಂಕರ್​ಗೆ ಸುಪ್ರೀಂ ಕೋರ್ಟ್(supreme court) ಬಿಗ್ ರಿಲೀಫ್ ನೀಡಿದೆ.

ಹೌದು,ಕರ್ನಾಟಕ ವಿಧಾನಭೆ ಚುನಾವಣೆ ತಯಾರಿಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಡಿಸಿ ಗೌರಿಶಂಕರ್​ಗೆ(DC Gaurishankar)ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023)ಸ್ಪರ್ಧಿಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಪ್ರಕರಣವೇನು?

2018ರ ಚುನಾವಣೆಯಲ್ಲಿ ಮತದಾರರಿಗೆ ವಿಮಾ ಪಾಲಿಸಿಯ ನಕಲಿ ಬಾಂಡ್ ವಿತರಿಸಿದ ಕೇಸ್‌ಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಶಾಸಕ ಗೌರಿಶಂಕರ್​ ಅವರನ್ನು ಹೈಕೋರ್ಟ್​ ಏಕಸದಸ್ಯ ಪೀಠ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಶಾಸಕ ಗೌರಿಶಂಕರ್​ ಪರ ವಕೀಲರು ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು.

ಇನ್ನೂ ಹೈಕೋರ್ಟ್​ ನೀಡಿದ ಒಂದು ತಿಂಗಳ ಅವಧಿಯಲ್ಲಿ ಗೌರಿಶಂಕರ್​ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್​ ನೀಡಿರುವ ತೀರ್ಪಿಗೆ ತಡೆ ತರಬೇಕಿತ್ತು. ಇಲ್ಲದಿದ್ದರೆ ಅನರ್ಹ ಭೀತಿ ಎದುರಿಸಬೇಕಾಗಿತ್ತು. ಹೀಗಾಗಿ ಗೌರಿ ಶಂಕರ್ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್, ಚುನಾವಣೆಗೆ ಸ್ಪರ್ಧೆಗೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಗೌರಿ ಶಂಕರ್​ಗೆ ಇದ್ದ ಆತಂಕ ಸದ್ಯಕ್ಕೆ ದೂರವಾಗಿದೆ.

RELATED ARTICLES

Related Articles

TRENDING ARTICLES