Wednesday, January 22, 2025

ಬಿ ಫಾರ್ಮ್‌ ಪಡೆಯುವ ವೇಳೆ ಕಣ್ಣೀರಿಟ್ಟ ನಿಖಿಲ್‌ ಕುಮಾರಸ್ವಾಮಿ

ರಾಮನಗರ : ನಿಖಿಲ್ ಕುಮಾರಸ್ವಾಮಿ ಇಂದು ಜೆಡಿಎಸ್​ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. 2023ನೇ ಚುನಾವಣೆ ಹಿನ್ನಲೆಯಲ್ಲಿ ಮಾಜಿ ದೇವೇಗೌಡರಿಂದ ಬಿ.ಫಾರಂ ಪಡೆದು ನಿಖೀಲ್ ನಾಮಪತ್ರ ಸಲ್ಲಿಸಿದ್ದಾರೆ.

ಹೌದು, ದೇವೇಗೌಡರಿಂದ ಬಿ.ಫಾರಂ ಪಡೆಯುವ ವೇಳೆ ಕಣ್ನೀರು ಹಾಕಿದ್ದಾರೆ. ಈ ವೇಳೇ ತಾತ ದೇವೇಗೌಡ ಅಜ್ಜಿ ಚೆನ್ನಮ್ಮ ಅವರ ಆಶೀವಾರ್ದ ಪಡಿದಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ಅನಿತಾಕುಮಾರಸ್ವಾಮಿ ಇದ್ದಾರೆ.

ಇದನ್ನೂ ಓದಿ : ಸ್ವಪಕ್ಷದ ವಿರುದ್ಧವೇ ಸಿದ್ದು ಆಪ್ತ ಜಮೀರ್ ಅಹ್ಮದ್ ಕಿಡಿ

2018ರ ಚುನಾವಣೆಯ ಸಂದರ್ಭದಲ್ಲಿ ಚನ್ನಪಟ್ಟಣ ಹಾಗೂ ರಾಮನಗರಿಂದ ಹೆಚ್​ಡಿ ಕುಮಾರಸ್ವಾಮಿ ನಿಂತು ಜಯಶಾಲಿಯಾಗಿದ್ದರು, ಆ ಬಳಿಕ ಅನಿತಾಕುಮಾರಸ್ವಾಮಿಯವರು ಸ್ಪರ್ಧಿಸಿದ್ದಾರೆ. ಅಂದ್ರೆ ಈಗ ಅನಿತಾಕುಮಾರಸ್ವಾಮಿ ತಮ್ಮ ಮಗನಿಗಾಗಿ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.

ಇನ್ನೂ 2023 ನೇ ಚುನಾವಣೆಗೆ ಬೆರಳೆಣಿಗೆಯಷ್ಟು ದಿನಗಳು ಮಾತ್ರ ಬಾಕಿ ಇದೆ. ಮೇ 10ರಂದು ಮತದಾನವಾದರೆ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

RELATED ARTICLES

Related Articles

TRENDING ARTICLES