Monday, December 23, 2024

ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ, ಚೆನ್ನೈ ಬಗ್ಗುಬಡಿಯುತ್ತಾ ಆರ್​ಸಿಬಿ?

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಚರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಸಿಕ್ಸರ್​ಗಳ ಸುರಿಮಳೆ ಹರಿದಿದ್ದು, ಚೆನ್ನೈ ತಂಡ ಬೃಹತ್ ಮೊತ್ತ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ 6 ವಿಕೆಟ್ ಗಳ ನಷ್ಟಕ್ಕೆ 226 ರನ್ ಗಳಿಸಿತು. ಚೆನ್ನೈ ಪರ ಕಾನ್ವೆ 83(45), ರಹಾನೆ 37(20) ಹಾಗೂ ಶಿವಂ ದುಬೆ 52(27) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ರಾಯುಡು 14(6), ಅಲಿ 18(8), ಜಡೇಜಾ 10(8) ರನ್ ಗಳಿಸಿದರು.

ಇದನ್ನೂ ಓದಿ : RCB ಅಭಿಮಾನಿಗಳೇ ಎಚ್ಚರ : ನಿಮ್ಮ ಬಳಿ ಇರುವ ಟಿಕೆಟ್ ಅಸಲಿಯೋ? ನಕಲಿಯೋ? ಪರಿಶೀಲಿಸಿ

ಆರ್​ಸಿಬಿ ತಂಡದ ಪರ ಹರ್ಷಲ್ ಪಟೇಲ್, ಹಸರಂಗ, ಸಿರಾಜ್, ವಿಜಯಕುಮಾರ್ ವೈಶಾಕ್ ಹಾಗೂ ಪಾರ್ನೆಲ್ ತಲಾ ಒಂದೊಂದು ವಿಕೆಟ್ ಪಡೆದರು.

ಶಿವಂ ದುಬೆ ದರ್ಬಾರ್

ಚೆನ್ನೈ ಸ್ಫೋಟಕ ಬ್ಯಾಟರ್ ಶಿವಂ ದುಬೆ ಚಿನ್ನಸ್ವಾಮಿಯಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದಾರೆ. 5 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಆರ್​ಸಿಬಿ ಬೌಲರ್​ಗಳನ್ನು ಚೆಂಡಾಡಿದರು. ಇದಲ್ಲದೆ, ಹರ್ಷಲ್ ಪಟೇಲ್ ಎಸೆತವನ್ನು ಬೃಹತ್ ಸಿಕ್ಸರ್​ಗೆ ಅಟ್ಟಿದ್ದಾರೆ. ಇದು 111 ಮೀಟರ್ ಎಂಬುದು ವಿಶೇಷ. ಇದಕ್ಕೂ ಮುನ್ನ ದುಬೆ ಮ್ಯಾಕ್ಸ್ ವೆಲ್ ಎಸೆತವನ್ನು ಸಿಕ್ಸರ್ ಬಾರಿಸಿ 101 ಮೀಟರ್ ದೂರ ಅಟ್ಟಿದ್ದರು.

RELATED ARTICLES

Related Articles

TRENDING ARTICLES