Monday, December 23, 2024

ಸಿಕ್ಸರ್, ಬೌಂಡರಿಗಳ ಅಬ್ಬರ.. ವೆಂಕಟೇಶ್ ಅಯ್ಯರ್ ಚೊಚ್ಚಲ ಶತಕ

ಬೆಂಗಳೂರು : ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್‌ನ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದು, ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಇಂದು ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಬ್ಯಾಟ್‌ನಿಂದ ಸಿಕ್ಸರ್, ಬೌಂಡರಿಗಳ ಸುರಿಮಳೆ ಹರಿದಿದೆ. ಚೆಂಡನ್ನು ವಾಂಖೆಡೆ ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೆ ಅಟ್ಟಿದ್ದಾರೆ. ಆ ಮೂಲಕ ಕೇವಲ 49 ಎಸೆತಗಳಲ್ಲಿ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ.

ಮುಂಬೈ ಬೌಲರ್‌ಗಳು ಕನಸಿನಲ್ಲಿಯೂ ನೆನಪಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ವೆಂಟಕೇಶ್ ಅಯ್ಯರ್ 9 ಸಿಕ್ಸರ್ ಹಾಗೂ 5 ಫೋರ್ ಚಚ್ಚಿದ್ದಾರೆ. ಕಣಕ್ಕಿಳಿಯುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ವೆಂಕಟೇಶ್ ಅಯ್ಯರ್ ಮುಂಬೈ ಇಂಡಿಯನ್ಸ್ ಬೌಲರ್​ಗಳ ಬೆಂಡೆತ್ತಿದ್ದಾರೆ.

ಇದನ್ನೂ ಓದಿ : RCBಗೆ ‘ವಿಜಯ’ ತಂದುಕೊಟ್ಟ ‘ಕನ್ನಡಿಗ ವಿಜಯ್’ : ಡೆಲ್ಲಿಗೆ ಸತತ 5ನೇ ಸೋಲು

51 ಎಸೆತಗಳನ್ನು ಎದುರಿಸಿ  9 ಭರ್ಜರಿ ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ 104 ರನ್​ ಬಾರಿಸಿದ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಕೆಕೆಆರ್ ಪರ ಶತಕ ಬಾರಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಬ್ರೆಂಡನ್‌ ಮೆಕ್ಕಲಂ (18th April 2008: Brendon McCullum 158* (73)) ಶತಕ ಸಿಡಿಸಿದ್ದರು. ವಿಶೇಷ ಎಂದರೆ ಬ್ರೆಂಡನ್‌ ಮೆಕ್ಕಲಂ ಏಪ್ರಿಲ್ 18, 2008ರಂದು ಶತಕ ಬಾರಿಸಿದ್ದರೆ, ವೆಂಕಟೇಶ್ ಅಯ್ಯರ್ (16th April 2023: Venkatesh Iyer 100* (49))ಏಪ್ರಿಲ್ 16ರಂದು(ಇಂದು) ಶತಕ ಬಾರಿಸಿದ್ದಾರೆ.

ಮುಂಬೈಗೆ 186 ರನ್ ಟಾರ್ಗೆಟ್

ಮುಂಬೈ ಇಂಡಿಯನ್ಸ್ ಗೆ ಕೆಕೆಆರ್ 186 ರನ್ ಗಳ ಟಾರ್ಗೆಟ್ ನೀಡಿದೆ. ಟಾಸ್ ಸೋತು ಕೆಕೆಆರ್ ತಂಡ ಮೊದಲು ಬ್ಯಾಟ್ ಮಾಡಿತು. ವೆಂಕಟೇಶ್ ಅಯ್ಯರ್ ಹೊರತುಪಡಿಸಿ ಉಳಿದ ಬ್ಯಾಟರ್ ಗಳು ಅಬ್ಬರಿಸಲು ವಿಫಲರಾದರು. ಭರವಸೆಯ ಆಟಗಾರ ರಸೆಲ್ ಅಜೇಯ 21 ರಿಂಕು ಸಿಂಗ್ 18, ಶಾರ್ದೂಲ್ 13 ರನ್ ಗಳಿಸಿದರು. ಮುಂಬೈ ಪರ ಹೃತಿಕ್ ಶೋಕೀನ್ 2 ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES