Sunday, November 3, 2024

‘ಸೋತ ಅಭ್ಯರ್ಥಿಯನ್ನು ಡಿಸಿಎಂ’ ಮಾಡಿದ್ದೆವು : ಸವದಿಗೆ ಜಾರಕಿಜೊಳಿ ಟಾಂಗ್

ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದು ಲಕ್ಷ್ಮಣ ಸವದಿ ಬಿಜೆಪಿ ಪಕ್ಷ ಬಿಟ್ಟು ಹೋದ್ರು ಅಂತಾ ಚಿಂತೆ ಮಾಡಬೇಡಿ ಎಂದು ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ರಮೇಶ್ ಜಾರಕಿಜೊಳಿ, ಸೋತ ಅಭ್ಯರ್ಥಿಯನ್ನು ಉಪ ಮುಖ್ಯಮಂತ್ರಿ ಮಾಡಿದ್ದೇವೆ. ಮಾಜಿ ಸಿಎಂ ಜಗದೀಶ್ ಕೂಡ ಬಿಜೆಪಿ ತೊರೆದಿದ್ದಾರೆ. ಹೋಗುವರು ಹೋಗಲಿ. ಆದರೆ, ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 15 ಸೀಟ್ ಗೆಲ್ಲಬೇಕು. ಅದರಲ್ಲಿ ವಿಷೇಶವಾಗಿ ಅಥಣಿಗೆ ಹೆಚ್ಚು ಒತ್ತು ಕೊಡುತ್ತೇವೆ. ಧನಂಜಯ ಜಾಧವ ಹಾಗೂ ಸಂಜಯ ಪಾಟೀಲ್ ನೀವೇ ಗ್ರಾಮೀಣ ಕ್ಷೇತ್ರದ ಉಸ್ತುವಾರಿ ತಗೊಬೇಕು. ನಾವು ಅಥಣಿ ಕ್ಷೇತ್ರದ ಕಡೆ ಹೆಚ್ಚು ಒತ್ತು ನೀಡುತ್ತೇವೆ. ಅಥಣಿ, ಕಾಗವಾಡ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿ ಒಡೆದು, ಕೆಜೆಪಿ ಕಟ್ಟಿದ್ದು ಯಾಕೆ? : ಯಡಿಯೂರಪ್ಪಗೆ ಶೆಟ್ಟರ್ ಟಾಂಗ್

ಹೆಬ್ಬಾಳ್ಕರ್ ಸೋಲಿಸುವುದು ಬೇಡ

ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸುವುದು ಬೇಡ. ಅಲ್ಲಿ ಬಿಜೆಪಿ ಪಕ್ಷ ಗೆಲ್ಲಬೇಕು. ಸವದಿ, ಶೆಟ್ಟರ್ ಪಕ್ಷ ಬಿಟ್ಟು ಹೋದ್ರು ಎಂದು ಚಿಂತೆ ಮಾಡಬೇಡಿ. ಕಾರ್ಯಕರ್ತರೆ ಇಲ್ಲಿ ಲೀಡರ್ ಆಗಿ ಬೆಳೆಯಬೇಕು. ಹೆಚ್ಚಿಗೆ ಚರ್ಚೆ ಬೇಡ. ಕೆಲ ವಿಚಾರ ವೇದಿಕೆ ಮೇಲೆ ಹೇಳಲು ಆಗೋದಿಲ್ಲ. ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆ ಮಾಡಿ ಎಂದು ರಮೇಶ್ ಜಾರಕಿಜೊಳಿ ಹೇಳಿದ್ದಾರೆ.

ಇನ್ನೂ, ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರೆಲ್ಲರೂ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಮರಳಿ ಬಿಜೆಪಿಗೆ ಬಂದರೆ ಸ್ವಾಗತ ಎಂದು ಆಫರ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES