Wednesday, January 22, 2025

ನಾನು ನಮ್ಮಪ್ಪಂಗೇ ಹುಟ್ಟಿರೋನು, ಬೇರೆ ಯಾರಿಗೂ ಅಲ್ಲಾ : ಗುರುಚರಣ್ ಫುಲ್ ಗರಂ

ಮಂಡ್ಯ : ‘ನಾನು ನಮ್ಮಪ್ಪಂಗೆ ಹುಟ್ಟಿರೋನು ಬೇರೆ ಯಾರಿಗೂ ಅಲ್ಲಾ..’ ಎಂದು ಮದ್ದೂರಿನಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಎಸ್. ಗುರುಚರಣ್ ಫುಲ್ ಗರಂ ಆಗಿದ್ದಾರೆ.

ಮದ್ದೂರಿನಲ್ಲಿ ಬೆಂಬಲಿಗರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಗುರುಚರಣ್ ಅವರು, ಗುರುಚರಣ್ ಸೂಟ್ಕೇಸ್ ತೆಗೆದು ಕೊಂಡು ಸೈಲೆಂಟಾಗಿದ್ದಾರೆ ಅಂತ ಮಾತಾಡ್ತಿದ್ದಾರೆ. ಹೀಗೆ ಮಾತನಾಡಿದವರಿಗೆ ಚಪ್ಪಲಿ ತೆಗೆದು ಕೊಂಡು ಹೊಡೆಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಪ್ಪಂಗೆ ಹುಟ್ಟಿದ ರಾಜಕಾರಣ ಮಾಡಿ

ಅಪ್ಪಂಗೆ ಹುಟ್ಟಿದ ರಾಜಕಾರಣವನ್ನು ಮಾಡೋಣ. ನಾನು ಈಗಲು ನಾನು ಜಮೀನ್ದಾರನಾಗಿದ್ದೇನೆ. ನಮ್ಮ ತಾತ ದೊಡ್ಡಪ್ಪ ಜಮೀನ್ದಾರರೇ. ನಾನು ಹುಟ್ಟಿದಾಗಿಲಿಂದ ನಮ್ಮ ದೊಡ್ಡಪ್ಪ (ಎಸ್.ಎಂ ಕೃಷ್ಣ) ಮಂತ್ರಿಯಾಗಿದ್ರು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಸ್ವಪಕ್ಷದ ವಿರುದ್ಧವೇ ಸಿದ್ದು ಆಪ್ತ ಜಮೀರ್ ಅಹ್ಮದ್ ಕಿಡಿ

ಬಿಜೆಪಿ ಸೇರಬೇಕಾ? ಜೆಡಿಎಸ್ ಸೇರಬೇಕಾ?

2004 ರಿಂದ ಸಹ ಈ ರೀತಿಯಾಗಿ ನಡೆದು ಕೊಂಡು ಬಂದಿದೆ. ಟಿಕೆಟ್ ಕೈತಪ್ಪಿದ್ದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಈಗಾಗ್ಲೆ ನಿಮ್ಮ ಸಹಲೆಯನ್ನು ನೀಡಿದ್ದೀರಾರಾ. ಪಕ್ಷೇತರವಾಗಿ ನಿಲ್ಲಬೇಕಾ? ಇಲ್ಲಾ ಬಿಜೆಪಿ ಅಥವಾ ಜೆಡಿಎಸ್ ಸೇರಬೇಕಾ? ಈ ಎಲ್ಲವನ್ನು ಮುಂದಿನ ದಿನಗಳಲ್ಲಿ ತಿಳಿಸುವೆ ಎಂದು ಹೇಳಿದ್ದಾರೆ.

ಹೈ ಕಮಾಂಡ್ ಗೆ ಕಿವಿ ಚುಚ್ಚಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ನಾನು ಪ್ರಶ್ನೆ ಮಾಡಿದ್ದೇನೆ. ನಾನೇನಾದ್ರು ಪಕ್ಷ ದ್ರೋಹ ಮಾಡಿದ್ನಾ? ಪಕ್ಷ ಸಂಘಟನೆ ಮಾಡಿಲ್ವ? ಯಾಕೆ ಟಿಕೆಟ್ ಕೈ ತಪ್ಪಿದೆ ಎಂದು ಕೇಳಿದೆ. ಇಲ್ಲಿ ಕಾಣದ ಕೈಗಳ ಆಟ ನಡೆದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಗುರುಚರಣ್ ಆರೋಪ ಮಾಡಿದ್ದಾರೆ.

ಯಾರೋ ಮಹಾನಾಯಕರು ಹೇಳಿದ್ದಾರೆ ಗುರು ಹತ್ತಿರ ಎಷ್ಟು ಓಟಿದೆ ಅಂತ. ಏನೋ ಒಂದೂವರೆ ಸಾವಿರ ಓಟ್ ಇರಬೇಕು ಅಷ್ಟೇ ಅಂತ ಹೈ ಕಮಾಂಡ್ ಗೆ ಕಿವಿ ಚುಚ್ಚಿದ್ದಾರೆ ಎಂದು ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES