Monday, December 23, 2024

Beetroot Benefits: ಬೀಟ್​ರೂಟ್​ ತಿನ್ನಲೇಬೇಕಂತೆ..ಯಾಕೆ ಗೊತ್ತಾ..?

ಬೀಟ್​ರೂಟ್ (Beetroot)​ನಿಂದ ಉಪಯೋಗಗಳು ಹತ್ತಾರು. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡುವಲ್ಲಿಂದ ಹಿಡಿದು, ಸೌಂದರ್ಯ ವೃದ್ಧಿಯವರೆಗೆ ಹಲವು ಉಪಯೋಗಗಳು ಇವೆ.

ಹೌದು, ನಮ್ಮಗೆ ಹುಷಾರಿಲ್ಲ ಅಂದ್ರೆ ನಾವು ನೇರವಾಗಿ ವೈದ್ಯರ ಬಳಿ ಹೋಗ್ತಿವಿ.ಆದ್ರೆ ಬಹುತೇಕರಿಗೆ ಗೊತ್ತಿಲ್ಲ ಮನೆಯಲ್ಲಿಯೇ ಇರುವ     ಹಣ್ಣು ಹಾಗೂ ತರಕಾರಿ ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ. ಹಾಗಾದ್ರೆ ಇವತ್ತು ಬಿಟ್ರೂಟ್ ನ ಮಹತ್ವವನ್ನು ತಿಳಿದುಕೊಳ್ಳೋಣ….

  1. ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವ ನೈಟ್ರೇಟ್ ಇರುವುದರಿಂದ ರಕ್ತ ಸಂಚಾರ ಸುಧಾರಿಸುತ್ತೆ.
  2. ಬೀಟ್ ರೂಟ್ ನಲ್ಲಿ ಇರುವ ನೈಟ್ರೇಟ್ ಅಂಶವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆ ಆಗುವ ಕಾರಣದಿಂದಾಗಿ ಇದು ರಕ್ತನಾಳಗಳನ್ನು ಹಿಗ್ಗುವಂತೆ ಮಾಡುತ್ತೆ. ಇದರಿಂದ ರಕ್ತದೊತ್ತಡ ಕಡಿಮೆ ಆಗುವುದು.
  3. ನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದು ದೈನಂದಿನ ಕಾರ್ಯಕ್ಕೆ ಶಕ್ತಿ ನೀಡುವುದು ಮತ್ತು ದೀರ್ಘಕಾಲ ದೈಹಿಕ ಚಟುವಟಿಕೆಯನ್ನು ದಣಿವಿಲ್ಲದೆ ಮಾಡಬಹುದಾಗಿದೆ.
  4. ಬೀಟ್ ರೂಟ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಆಂಶವು ಹಲವಾರು ವಿಧದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.
  5. ಬೀಟ್ ರೂಟ್ ನಲ್ಲಿ ಇರುವ ಫಾಲಟೆ ಅಂಶವು ಚರ್ಮದ ಆರೋಗ್ಯ ವೃದ್ಧಿಸುವುದು. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡಿ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.
  6. ಕೂದಲಿನ ಆರೈಕೆಗೆ
    ಒಣ ತಲೆಬುರುಡೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ನೀವು ಬೀಟ್ ರೂಟ್ ಜ್ಯೂಸ್ ಬಳಸಿ. ಬೀಟ್ ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ ರೂಟ್ ಜ್ಯೂಸ್ ಗೆ ವಿನೇಗರ್ ಹಾಕಿದರೆ ಆಗ ಒಣ ತಲೆಬುರುಡೆ ಸಮಸ್ಯೆ ನಿವಾರಣೆ ಆಗುವುದು.
  7. ಮಧುಮೇಹ ರೋಗಕ್ಕೆ ಬೀಟ್‌ರೂಟ್ ತುಂಬಾ ಒಳ್ಳೆಯದು – ಅರ್ಧ ಕಪ್ ಬೀಟ್‌ರೂಟ್ ರಸ ಸೇವಿಸಿದ ಮೇಲೆ ಊಟದ ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬರಲಿದೆ. ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ಈ ಪರಿಣಾಮ ಹೆಚ್ಚು ಕಂಡುಬರಲಿದೆ.
  8. ಹೃದಯದ ಆರೋಗ್ಯ ಕಾಪಾಡುವಲ್ಲೂ ಮಹತ್ವದ ಪಾತ್ರ ವಹಿಸಲಿದೆ. ಬೀಟ್‌ರೂಟ್ ರಸ ಸೇವಿಸಿ ಕೇವಲ 30 ನಿಮಿಷಗಳಲ್ಲಿ, ತಮ್ಮ ರಕ್ತದೊತ್ತಡದ ಮಟ್ಟದಲ್ಲಿ ಗಣನೀಯ ಇಳಿಕೆ ಕಾಣಲಿದೆ.

 

 

RELATED ARTICLES

Related Articles

TRENDING ARTICLES