ಬೆಂಗಳೂರು : ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಕನಕಪುರ ಕ್ಯಾಂಡೆಟ್ ಅಂತಾ ಘೋಷಣೆ ಮಾಡೋ ವರೆಗೂ ಒನ್ ಸೈಡ್ ಮ್ಯಾಚ್ ನಂತಿದ್ದ ಕನಕಪುರ ಕ್ಷೇತ್ರ, ಆರ್ ಅಶೋಕ್ ಆಗಮನದಿಂದ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿದೆ. ಹೈ ಕಮಾಂಡ್ ಕೊಟ್ಟ ಟಾಸ್ಕೋ ನೀಡುತ್ತಿದ್ದಂತೆ ನಾಳೆಯಿಂದ ಆರ್ ಅಶೋಕ್ ಬಿರುಸಿನ ಪ್ರಚಾರವನ್ನು ಕೈಗೊಳ್ಳಲಿದ್ದಾರೆ.
ಹೌದು, ನಾಳೆಯಿಂದ ಕನಕಪುರ ಅಖಾಡಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದಾರೆ.
ಕನಕಪುರ ಕ್ಷೇತ್ರದ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಲಿರುವ ಆರ್ ಅಶೋಕ್ ಚುನಾವಣೆಗೆ ಗೆಲ್ಲಲು ಬೇಕಾದ ತಂತ್ರವನ್ನು ಎಣಿಯಳು ಅನೇಕ ರಣತಂತ್ರ ರೂಪಿಸಲು ಸಜ್ಜಾಗಿದೆ.
ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್ : ಸಿದ್ದರಾಮಯ್ಯ
ಡಿಕೆಶಿ ಭದ್ರಕೋಟೆಯಲ್ಲಿ ನಾಳೆಯಿಂದ ಪ್ರಚಾರವನ್ನು ಆರ್ ಅಶೋಕ್ ಕೈಗೊಳ್ಳಲಿದ್ದಾರೆ. ಇನ್ನೂ ಏಪ್ರಿಲ್ 19ಕ್ಕೆ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿರುವ ಅಶೋಕ್.. ಬೃಹತ್ ಸಾರ್ವಜನಿಕ ಸಮಾವೇಶದ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸಚಿವ ಆರ್ ಅಶೋಕ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ ನೀಡಲಿದ್ದಾರೆ.