Tuesday, April 23, 2024

ಪ್ಲೀಸ್.. ಮೋದಿ ಜೀ ಶಾಲೆ ಕಟ್ಟಿಸಿಕೊಡಿ : ಪ್ರಧಾನಿ ಮೋದಿಗೆ ಜಮ್ಮು ಬಾಲಕಿ ಮನವಿ

ಬೆಂಗಳೂರು : ಪ್ಲೀಸ್ ಮೋದಿ ಜೀ ಶಾಲೆ ಕಟ್ಟಿಸಿಕೊಡಿ ಎಂದು ಸೀರತ್ ನಾಜಿ ಎಂಬುವ ಜಮ್ಮುವಿನ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಒಂದು ಬೇಡಿಕೆ ಇಟ್ಟಿದ್ದಾಳೆ.

ಪ್ರಧಾನಿ ಮೋದಿಯವರೇ, ನಾನು ನನ್ನ ಸ್ನೇಹಿತರೆಲ್ಲರೂ ಶಾಲೆಯಲ್ಲಿ ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತೇವೆ, ಇಡೀ ಶಾಲೆ ಸಂಪೂರ್ಣ ಧೂಳುಮಯವಾಗಿದೆ ಎಂದು ವಿಡಿಯೋ ಮೂಲಕ ಹೇಳಿದ್ದಾಳೆ.

ಸೀರತ್ ಜಮ್ಮು ಕಾಶ್ಮೀರದ ಕಥುವಾದ ಲೋಹಾಯ್ ಮಲ್ಹಾರ್ ಗ್ರಾಮದವಳಾಗಿದ್ದಾಳೆ. ಒಂದು ಶಾಲೆಯನ್ನು ನಿರ್ಮಿಸಿಕೊಡಿ ಪ್ಲೀಸ್ ಮೋದಿಯವರೇ ಎಂದು ಮನವಿ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಆಂಧ್ರ ಸಿಎಂ ಪೋಸ್ಟರ್ ಹರಿದಿದ್ದಕ್ಕೆ ‘ನಾಯಿ ವಿರುದ್ಧ ಎಫ್ಐಆರ್’

ಬಾಲಕಿ ಬೇಡಿಕೆ ಏನು?

ಬಾಲಕಿ ವಿಡಿಯೋದಲ್ಲಿ ಶಾಲೆಯ ಕಾಂಪೌಂಡ್, ಶಾಲಾ ಕಟ್ಟಡವನ್ನು ತೋರಿಸಿದ್ದಾಳೆ. ಬಳಿಕ ಮೋದಿಯವರೇ ನಿಮ್ಮ ಬಳಿ ನಾನೇನೋ ಹೇಳಬೇಕಿದೆ ಎಂದಿದ್ದಾಳೆ. ಬಾಗಿಲು ಮುಚ್ಚಿರುವ ಎರಡು ರೂಂಗಳನ್ನು ತೋರಿಸಿ ಅದು ಪ್ರಿನ್ಸಿಪಲ್ ಕಚೇರಿ ಹಾಗೂ ಸ್ಟಾಫ್​ ರೂಂ ಎಂದು ತಿಳಿಸಿದ್ದಾಳೆ. ನೋಡಿ ಶಾಲೆಯ ನೆಲವು ಎಷ್ಟು ಗಲೀಜಾಗಿದೆ ನಾವು ಇಲ್ಲಿಯೇ ಕುಳಿತು ಪಾಠ ಕೇಳಬೇಕು, ನಮ್ಮ ಸಮವಸ್ತ್ರಗಳು ಕೂಡ ಹಾಳಾಗುತ್ತಿವೆ, ನಮ್ಮಲ್ಲಿ ಬೆಂಚ್​ಗಳು ಕೂಡ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ.

2 ಮಿಲಿಯನ್​ ವ್ಯೂಸ್

ಮೋದಿಯವರೆ ನೀವು ಇಡೀ ದೇಶದ ಜನರ ಕಷ್ಟಗಳನ್ನು ಕೇಳುತ್ತೀರಿ ನನ್ನ ಮನವಿಯನ್ನು ಕೂಡ ಸ್ವೀಕರಿಸಿ, ನಮಗಾಗಿ ಒಂದು ಶಾಲೆ ಕಟ್ಟಿಸಿಕೊಡಿ ಎಂದು ಪರಿ ಪರಿಯಾಗಿ ಮನವಿ ಮಾಡಿದ್ದಾಳೆ. ಇದೀಗ ಆ ವಿಡಿಯೋ 2 ಮಿಲಿಯನ್​ ವ್ಯೂಸ್​ ಹಾಗೂ 1,16,000 ಲೈಕ್ಸ್​ಗಳನ್ನು ಪಡೆದಿದೆ. ಕೇವಲ 5 ನಿಮಿಷದ ವಿಡಿಯೋ ಇದಾಗಿದೆ. ಆಕೆ ತನ್ನನ್ನು ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ.

RELATED ARTICLES

Related Articles

TRENDING ARTICLES