Wednesday, January 22, 2025

ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿ ಅವರ ಅದ್ಭುತ ಸಂದೇಶಗಳು ಇಲ್ಲಿವೆ.

ಇಂದು ದೇಶ  ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತಿ.(Ambedkar Jayanti) ಬಾಬಾ ಸಾಹೇಬರ ಬದುಕು ಎಲ್ಲರಿಗೂ ಸ್ಫೂರ್ತಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ದೀಪ. ಇವರ ಚಿಂತೆನೆಗಳು ಇಂದಿಗೂ ಜೀವಂತ. ಯುವಜನೆತೆಗೆ  ಹೊಸ ಚೈತನ್ಯ., ಶಕ್ತಿ. ಇವರ ಜೀವನ ಪಾಠ ಎಲ್ಲಾರಿಗೂ ಮಾದರಿ. ಇಂತಹ ಮಹಾನ್​ವ್ಯಕ್ತಿಯ ಜೀವನ ತತ್ವಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿಂದೆ. ಮುಂದೆ ಓದಿ….

ಹೌದು, ಡಾ. ಭೀಮರಾವ್ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್‌ನಲ್ಲಿ 1891 ರ ಏಪ್ರಿಲ್ 14 ರಂದು ಜನಿಸಿದರು. ಇವರು  ದೀನ ದಲಿತರ ಬಗ್ಗೆ ಮೊಟ್ಟ ಮೊದಲ ಬಾರಿಗೆ ಧ್ವನಿ ಎತ್ತಿದ್ದು ಇವರೇ.. ಇಂತಹ ವ್ಯಕ್ತಿ ಪ್ರತಿಯೊಬ್ಬರಿಗೂ ಮಾದರಿ. ಇನ್ನೂ  ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ ದಲಿತರಿಗಾಗಿ ಹೋರಾಡಿದರು ಮತ್ತು ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು. ಅವರು ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿದರು ಮತ್ತು ಸಮಾಜದ ಎಲ್ಲ ಜನರಿಗೆ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳಲು ಜಾತಿ ಅಡೆತಡೆಗಳನ್ನು ಕೆಡವಲು ಶ್ರಮಿಸಿದರು. ದೀನ ದಲಿತರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ಒತ್ತು ನೀಡಿದರು.

ಅಂಬೇಡ್ಕರ್ ಅವರು ನೀಡಿದ ಅದ್ಭುತ ಸಂದೇಶಗಳು

  • ಜ್ಞಾನವು  ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ.
  • ಶಿಕ್ಷಣ  ಎಂಬುವುದು ಈ ಜಗತ್ತಿನಲ್ಲಿ ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ.
  • ನಾವು ಮನಸ್ಸಿನಿಂದ ಮುಕ್ತರಾಗಿದ್ದರೆ ನೀವು ನಿಜವಾಗಿಯೂ ಸ್ವತಂತ್ರರು.
  • ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿರುವುದಿಲ್ಲ
  • ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದಕಲು ಪ್ರಯತ್ನಿಸಿ.
  • ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು.
  • ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು.
  • ಸಂವಿಧಾನ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ.
  • ವಿದ್ಯಾವಂತರಾಗಿ, ಸಂಘಟಿತರಾಗಿ ಎಲ್ಲರೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.
  • ಮೂಢನಂಬಿಕೆಯಿಂದ ಹೊರಬರಬೇಕು.
  • ಇನ್ನೋಬ್ಬರನ್ನು ಶೋಷಣೆ ಮಾಡುವ ಬದಲು ಮನುಷ್ಯತ್ವಕ್ಕೆ ಬೆಲೆ ನೀಡಬೇಕು.
  • ಬದಕು ಸರಳ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು.
  • ಯಾರನ್ನು ಹೀನಯವಾಗಿ ಕಾಣಬಾರದು.
  • ನಾವು ಜ್ಞಾನದಿಂದ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯ.

 

 

 

 

RELATED ARTICLES

Related Articles

TRENDING ARTICLES