ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಸಹೋದರ ಎಚ್.ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಮರುಗಿದ್ದಾರೆ.
ಕಡೂರಿನ ಯಗಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಇಂದಿಗೂ ರಾಜ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಎರಡು ಸಲ ಹಾರ್ಟ್ ಆಪರೇಶನ್ ಆಗಿದೆ. ಆದರೂ, ಹಗಲು-ರಾತ್ರಿ ಹೋರಾಟ ಮಾಡುತ್ತಿದ್ದಾರೆ. ಬಡವರ ಬಗ್ಗೆ ಕಾಳಜಿ ಇರುವ ಪಕ್ಷ ಜೆಡಿಎಸ್, ಅವರನ್ನು ಬೆಳೆಸಬೇಕು ಅಂತ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಾಸನ ಟಿಕೆಟ್ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರೇವಣ್ಣ, ಯಾರೂ ತಲೆ ಕೇಡಿಸಿಕೊಳ್ಳಬೇಕಿಲ್ಲ. ಕುಮಾರಣ್ಣ, ದೇವೇಗೌಡರು ತೀರ್ಮಾನ ಮಾಡುತ್ತಾರೆ. ನಡೀರಿ..ನಡೀರಿ.. ಎಂದು ಜಾಣ್ಮೆಯ ಉತ್ತರರ ನೀಡಿದ್ದಾರೆ.
ಇದನ್ನೂ ಓದಿ : ನಾಳೆ ಜೆಡಿಎಸ್ 2ನೇ ಪಟ್ಟಿ : ‘ನನ್ನ ಲಿಸ್ಟ್ ನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದ ಕುಮಾರಣ್ಣ
ನಾವೇಕೆ ಚಾಮರಾಜ ಕ್ಷೇತ್ರಕ್ಕೆ ಹೋಗಲಿ
ಭವಾನಿ ರೇವಣ್ಣ ಚಾಮರಾಜ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಅಂತ ನಾವು ಎಲ್ಲಿ ಹೇಳಿದ್ದೇವೆ. ದೇವೇಗೌಡರು, ಕಮಾರಣ್ಣ, ರಾಜ್ಯಾಧ್ಯಕ್ಷರು ಹೇಳಿದಂತೆ ಎಂದು ಆವತ್ತಿನಿಂದ ಹೇಳ್ತಿದ್ದೇವಲ್ಲ. ನಾವೇಕೆ ಚಾಮರಾಜ ಕ್ಷೇತ್ರಕ್ಕೆ ಹೋಗಲಿ. ಚಾಮರಾಜದಲ್ಲಿ ನಮ್ಮ ನಾಯಕರು ಇದ್ದಾರೆ, ನಮಗ್ಯಾಕೆ? ಎಂದು ರೇವಣ್ಣ ಹೇಳಿದ್ದಾರೆ.
ನಾನು ಎರಡು ಕಡೆ ನಿಲ್ಲಲ್ಲ
ನಾನು, ನಮ್ಮ ಕಾರ್ಯಕರ್ತರು ಹಾಸನ ಜಿಲ್ಲೆ ಬಿಟ್ಟು ಎಲ್ಲೂ ಹೋಗಲ್ಲ. ಪತ್ನಿ ಭವಾನಿಯಾಗಲಿ, ನಾನಾಗಲಿ ಬೇರೆ ಜಿಲ್ಲೆಗೆ ಹೋಗಲ್ಲ. ದೇವೇಗೌಡರ ಆಶೀರ್ವಾದಿಂದ ಐದು ಬಾರಿ ಗೆದ್ದಿದ್ದೇನೆ. ಹೊಳೆನರಸೀಪುರ ಜನ 30 ವರ್ಷದಿಂದ ನನ್ನನ್ನ ಗೆಲ್ಲಿಸಿದ್ದಾರೆ. ನಾನೆಲ್ಲೂ ಎರಡು ಕಡೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.