Monday, December 23, 2024

ಕಡೂರು ಹಾಸನ ಲೋಕಸಭಾ ವ್ಯಾಪ್ತಿಗೆ ಬರುತ್ತೆ : ರೇವಣ್ಣಗೆ HDK ಟಾಂಗ್

ಬೆಂಗಳೂರು : ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಹಾರಿದ್ದ ವೈಎಸ್ ವಿ ದತ್ತಾ ಮರಳಿ ಜೆಡಿಎಸ್ ಪಕ್ಷಕ್ಕೆ ಮರಳಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ರೇವಣ್ಣ ಅಂಡ್ ಫ್ಯಾಮಿಲಿಗೆ ಟಾಂಗ್ ಕೊಟ್ಟಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು‌ ಪ್ರವಾಸದಲ್ಲಿದ್ದೇನೆ. ಕಡೂರು ಕ್ಷೇತ್ರ ಹಾಸನ ಲೋಕಸಭಾ ವ್ಯಾಪ್ತಿಗೆ ಬರುತ್ತದೆ ಎಂದು ಕುಮಾರಸ್ವಾಮಿ ಜಾಣ್ಮೆಯ ಉತ್ತರ ನೀಡಿದ್ದಾರೆ.

ಹಾಸನದ ವಿಚಾರದಲ್ಲಿ ಹೆಚ್ಚಿನ ರೀತಿಯಲ್ಲಿ, ಬೇರೆ ಬೇರೆ ರೀತಿಯಲ್ಲಿ ತೀರ್ಮಾನ ಮಾಡಬೇಕಿಲ್ಲ. ಇದನ್ನೆಲ್ಲ ಅವರು ಮಾಡಿಕೊಳ್ಳುತ್ತಾರೆ. ನನಗೆ ಅದು ಸಂಬಂಧವಿಲ್ಲ. ವೈಎಸ್ ವಿ ದತ್ತಾ ಅವರು ನನ್ನ‌ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ Next CM : ಬಿ.ವೈ.ವಿಜಯೇಂದ್ರ ಶಾಕಿಂಗ್ ಹೇಳಿಕೆ

ನಾನು ದತ್ತಾ ಅವರಷ್ಟು ಬೆಳೆದಿಲ್ಲ

ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹಾಗೂ ವೈಎಸ್ ವಿ ದತ್ತಾ ಅವರು ಮೊದಲಿನಿಂದಲೂ ಒಡನಾಡಿಗಳು. ನಾನು ದತ್ತಾ ಅವರಷ್ಟು ಬೆಳೆದಿಲ್ಲ. ನನ್ನ ಹತ್ತಿರ ದತ್ತಾ ಅವರು ಚರ್ಚೆ ಮಾಡಿಲ್ಲ. ಅವರಿಗೆ ನನ್ನ ಅವಶ್ಯಕತೆ ಇಲ್ಲ ಅನ್ನೋದು ನನಗೆ ಗೊತ್ತಿದೆ ಎಂದು ದತ್ತಾ ಸೇರ್ಪಡೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನೆಹರೂ ಒಲೇಕಾರ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಹಲವಾರು ಪ್ರಮುಖರು ಅಭ್ಯರ್ಥಿ ಆಗಬೇಕು ಅಂತಾ ಆ ಕಡೆ..ಈ ಕಡೆ ಹೋಗುವ ಪ್ರಕ್ರಿಯೆ ಪ್ರಾರಂಭವಾಗಿದೆ. ಎಷ್ಟರಮಟ್ಟಿಗೆ ಯಾರು ಯಾರು, ಯಾರ ಜೊತೆಗೆ ಹೋಗ್ತಾರೆ ಎನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ. ಎರಡ್ಮೂರು ದಿನ ಕಾದು ನೋಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES