Monday, December 23, 2024

ಮಲ್ಲೇಶ್ವರಂನಲ್ಲಿ ಪಾದಯಾತ್ರೆ ಮೂಲಕ ಅಶ್ವತ್ಥ್ ನಾರಾಯಣ್ ಮತಯಾಚನೆ

ಬೆಂಗಳೂರು : ವಿಧಾನಸಭೆ ಚುನಾವಣೆ (Assembly Elections 2023)ಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಜಯಭೇರಿ ಬಾರಿಸಲು ಸಿದ್ಧವಾಗಿವೆ. ಇನ್ನೂ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಲ್ಲೇಶ್ವರಂ ಕ್ಷೇತ್ರದಲ್ಲಿ ಬಿಜೆಪಿ ಹೈಅಲರ್ಟ್ ಆಗಿದ್ದು, ಎದುರಾಳಿಗಳಿಗೆ ನಡುಕ ಹುಟ್ಟಿದೆ.

ಹೌದು, ಬಿಜೆಪಿಯಿಂದ ಮಲ್ಲೇಶ್ವರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಸಿ.ಎನ್ ಅಶ್ವಥ್ ನಾರಾಯಣ ಅವರಿಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಇಂದು ಅಶ್ವಥ್ ನಾರಾಯಣ ಅವರು ಮಲ್ಲೇಶ್ವರನ ಸುತ್ತಮುತ್ತ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಮಲ್ಲೇಶ್ವರದ ಬಲಮುರಿ ದೇವಸ್ಥಾನದಿಂದ ಶುರುವಾದ ಪಾದಯಾತ್ರೆಯೂ ಮಲ್ಲೇಶ್ವರದ ಕೋದಂಡರಾಮಪುರ ದೋಬಿ ಘಾಟ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಭೇಟಿ ನೀಡಿ ಪ್ರಚಾರ ಕೈಗೊಂಡಿದ್ದಾರೆ.

ಮುಂದಿನ ಐದು ವರ್ಷ ನಾವು ಜನಪರ ಸೇವೆಗಳನ್ನು ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡುವುದರ ಮೂಲಕ ಮತಯಾಚನೆ ಮಾಡಿದರು.

 

 

RELATED ARTICLES

Related Articles

TRENDING ARTICLES