Thursday, December 26, 2024

ನಯನ ಮೋಟಮ್ಮಗೆ ಸಂಕಷ್ಟ : ಸ್ವಪಕ್ಷದವರಿಂದಲೇ ‘ಬಿ ಫಾರ್ಮ್’ಗೆ ಅಡ್ಡಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಮಾಜಿ ಸಚಿವೆ ಮೋಟಮ್ಮ ಹಾಗೂ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಸ್ವಪಕ್ಷದವರೇ ಮೋಟಮ್ಮ ಫ್ಯಾಮಿಲಿ ವಿರುದ್ಧ ಸಿಟಿದೆದ್ದಿದ್ದಾರೆ.

ಹೌದು, ಮೂಡಿಗೆರೆ ಕ್ಷೇತ್ರದ ಟೀಕೆಟ್ ನಯನ ಮೋಟಮ್ಮ ಅವರಿಗೆ ಬಿ ಫಾರ್ಮ್ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಕಳೆದ 20 ವರ್ಷದಿಂದ ನಯನಾ ಮೋಟಮ್ಮ ಅಥವಾ ಮೋಟಮ್ಮ ನವರು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಸಮರ್ಥವಾಗಿ ಬೆಳೆಸಿಕೊಂಡು ಬಂದಿಲ್ಲ. ಈ ಹಿಂದೆ ಅನೇಕ ಚುನಾವಣೆಗಳಲ್ಲಿ ಮೋಟಮ್ಮ ಮತ್ತು ನಯನ ಮೋಟಮ್ಮ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನವನ್ನು ಸಹ ಮಾಡಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ನಂಬಿಸಿ ಕತ್ತು ಕುಯ್ಯುವುದಕ್ಕೆ ‘ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್’ : ಕಾಂಗ್ರೆಸ್ ಲೇವಡಿ

ಒಕ್ಕಲಿಗ ಮತದಾರರ ವಿರೋಧ

ಮೂಡಿಗೆರೆ ಕ್ಷೇತ್ರದ ಎಲ್ಲಾ ಜನಾಂಗದ ಮತದಾರರು ಮೋಟಮ್ಮ ಮತ್ತು ನಯನ ಮೋಟಮ್ಮ ಅವರ ವಿರುದ್ಧ ಇದ್ದಾರೆ. ಈ ಬಾರಿ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲ್ಲುವ ಅವಕಾಶ ಹೆಚ್ಚಿದೆ. ನಯನ ಅವರಿಗೆ ಒಕ್ಕಲಿಗ ಮತದಾರರ ವಿರೋಧವಿದ್ದು ಅವರಿಗೆ ಪಕ್ಷ ಸಂಘಟನೆ ಮಾಡಲು ಮತ್ತಷ್ಟು  ಸಮಯಬೇಕು ಎಂದು ಕಾರ್ಯಕರ್ತರು ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದಾರೆ.

ನಯನ ಮೋಟಮ್ಮ ಅವರು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ. ಈ ಬಾರಿ ಚುನಾವಣೆಗೆ ಮೊಟಮ್ಮ ಬದಲು ಹೊಸ ಅಭ್ಯರ್ಥಿಗೆ ಟಿಕಟಟ್ ನೀಡಬೇಕು. ನಯನ ಮೋಟಮ್ಮ ಅವರಿಗೆ ಯಾವುದೇ ಕಾರಣಕ್ಕೂ  ಬಿ ಫಾರ್ಮ್ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ.

RELATED ARTICLES

Related Articles

TRENDING ARTICLES