ಬೆಂಗಳೂರು : ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರು ಹಾಗೂ ಆಪ್ತರಿಗೆ (ರಾಜ್ಯ ವಿಧಾನಸಭಾ ಚುನಾವಣೆ) ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅವರನ್ನು ಗೆಲ್ಲಿಸಿಕೊಂಡು ಬರುವವರೆಗೂ ಬಿಎಸ್ ವೈ ವಿರಮಿಸುವಂತಿಲ್ಲ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿ.ಎಸ್ ಯಡಿಯೂರಪ್ಪ, ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತಮ್ಮೇಶ್ ಗೌಡರನ್ನು ಗೆಲ್ಲಿಸದಿದ್ದರೆ, ನಾನು ತಲೆ ಎತ್ತಿಕೊಂಡು ಓಡಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾನು ಸ್ವಾಭಿಮಾನಿ, ಲಜ್ಜೆಗೆಟ್ಟ ರಾಜಕಾರಣಿ ಅಲ್ಲ : ಲಕ್ಷ್ಮಣ ಸವದಿ
ನನ್ನ ಮರ್ಯಾದೆ ಉಳಿಯುವುದಿಲ್ಲ
ಇವನೊಬ್ಬನಿಗಾಗಿ ಕೊನೆತನಕ ಹೋರಾಟ ಮಾಡಿ, ಮೂರ್ನಾಲ್ಕು ಬಾರಿ ಹೈಕಮಾಂಡ್‌ನೊಂದಿಗೆ ಚರ್ಚಿಸಿ, ಕೊನೆಗೆ ಏನೋ ಮಾಡಿ ಟಿಕೆಟ್ ಕೊಡಿಸಿದ್ದೇನೆ. ಹಾಗಾಗಿ, ತಮೇಶ್‌ಗೌಡನನ್ನ ಗೆಲ್ಲಿಸಬೇಕು. ಇಲ್ಲದಿದ್ದರೆ ನನ್ನ ಮರ್ಯಾದೆ ಉಳಿಯುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಟಿಕೆಟ್ ಪಡೆದ ಯಡಿಯೂರಪ್ಪ ಆಪ್ತರು
- ಬಿ.ವೈ. ವಿಜಯೇಂದ್ರ(ಶಿಕಾರಿಪುರ)
- ತಮ್ಮೇಶ್ ಗೌಡ(ಬ್ಯಾಟರಾಯನಪುರ)
- ಸಪ್ತಗಿರಿಗೌಡ( ಗಾಂಧಿನಗರ)
- ಜಗದೀಶ್ ಮೆಟಗುಡ್( ಬೈಲಹೊಂಗಲ)
- ಮುರುಗೇಶ್ ನಿರಾಣಿ( ಬೀಳಗಿ)
- ಸಿದ್ದು ಸವದಿ( ತೇರದಾಳ)
- ದೊಡ್ಡನಗೌಡ ಪಾಟೀಲ್ (ಹುನಗುಂದ)
- ಎಂ.ಪಿ. ರೇಣುಕಾಚಾರ್ಯ( ಹೊನ್ನಾಳಿ)
- ಸಿ.ಎಚ್. ವಿಜಯಶಂಕರ್(ಪಿರಿಯಾಪಟ್ಟಣ)
- ಲಿಂಗಮೂರ್ತಿ(ಹೊಸದುರ್ಗ)