Sunday, November 3, 2024

‘ನಾನು ಚಾಮರಾಜಪೇಟೆಗೆ ಹೊಸಬನಲ್ಲ..’ : ಜಮೀರ್ ಗೆ ಭಾಸ್ಕರ್ ರಾವ್ ಟಾಂಗ್?

ಬೆಂಗಳೂರು : ಚಾಮರಾಜಪೇಟೆಗೆ ಹೊಸಬನಲ್ಲ, ನಾನು ಚಾಮರಾಜಪೇಟೆಯಲ್ಲೇ ನನ್ನ ಕಚೇರಿ ಮಾಡ್ತಿದ್ದೇನೆ ಎನ್ನುವ ಮೂಲಕ ಕಾಂಗ್ರೆಸ್ ಶಾಸಕ ಬಿ.ಝಡ್ ಜಮೀರ್ ಅಹಮ್ಮದ್ ಖಾನ್ ಅವರಿಗೆ ಪರೋಕ್ಷವಾಗಿ ಚಾಮರಾಜಪೇಟೆ ಬಿಜೆಪಿ ಟಿಕೆಟ್ ಅಭ್ಯರ್ಥಿ ಭಾಸ್ಕರ್ ರಾವ್ ಟಾಂಗ್ ಕೊಟ್ಟಿದ್ದಾರೆ.

ಚಾಮರಾಜಪೇಟೆ ಟಿಕೆಟ್ ಘೋಷಣೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 30 ವರ್ಷದಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. ನಾನು ಸಹ ಚಾಮರಾಜಪೇಟೆ ವಾಸಿ. ಮೇ 10ನೇ ತಾರೀಖು ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ.

ನನಗೂ ಸುವರ್ಣ ಅವಕಾಶ ಸಿಕ್ಕಿದೆ

ಬಿಜೆಪಿ ಹೈಕಮಾಂಡ್ 189 ಅಭ್ಯರ್ಥಿಳ ಟಿಕೆಟ್‌ ಘೋಷಣೆ ಮಾಡಿದೆ. ನನಗೂ ಸುವರ್ಣ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಗೆ ಚಿರಋಣಿ. ಬಿಜೆಪಿ ಪಕ್ಷದಲ್ಲಿ ಸಿದ್ಧಾಂತ, ರಾಷ್ಟ್ರೀಯತೆ ಇರೋದ್ರಿಂದ ಪಕ್ಷಕ್ಕೆ ಸೇರಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳಿಗೆ ಟಿಕೆಟ್ : 52 ಹೊಸ ಮುಖಗಳಿಗೆ ಮನ್ನಣೆ

ಇದೇ ಬೇರೆ ಚಾಪ್ಟರ್..!

ಚಾಮರಾಜಪೇಟೆಯಲ್ಲಿ ಸೈಲೆಂಟ್ ಸುನೀಲ್ ಪಕ್ಷೇತರ ಸ್ಪರ್ಧೆ ವಿಚಾರ ಪ್ರತಿಕ್ರಿಯಿಸಿ, ರಾಜಕೀಯ ಬೇರೆ ಪೋಲಿಸ್ ಇಲಾಖೆ ಬೇರೆ. ನಾನು ಪೋಲಿಸ್ ಇಲಾಖೆ ಬಿಟ್ಟು ಆಗಿದೆ. ಅದೇ ಬೇರೆ ಚಾಪ್ಟರ್, ಇದೇ ಬೇರೆ ಚಾಪ್ಟರ್. ಸಂವಿಧಾನದ ಅಡಿಯಲ್ಲಿ ಯಾರ್ಯಾರಿಗೆ ಅವಕಾಶವಿದೆಯೋ ಅವರನ್ನು ಗೌರವಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

ಸೈಲೆಂಟ್ ಸುನೀಲ್ ಮೇಲೆ ಏನು ಕೇಸ್ ಇದೆ, ಇಲ್ಲ ಅನ್ನೋದೆ ಸೆಕೆಂಡರಿ. ಸಂವಿಧಾನ ಅವ್ರಿಗೆ ಒಂದು ಅವಕಾಶ ಕೊಟ್ಟಿದೆ. ಸಂವಿಧಾನದ ಅಡಿಯ ವೇದಿಕೆಯಲ್ಲಿ ಸರಿಸಮಾನರಾಗಿದ್ದೇವೆ. ಪೋಲಿಸ್ ಬ್ಯಾಗೆಜ್ ತಗೊಂಡು ರಾಜಕೀಯಕ್ಕೆ ಬಂದ್ರೆ ಸರಿಹೋಗಲ್ಲ. ಅದು ಆಲ್‌ರೆಡಿ ಕ್ಲೋಸಡ್ ಚಾಪ್ಟರ್ ಎಂದು ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES