Wednesday, January 22, 2025

ರಾಜಧಾನಿ ಬೆಂಗಳೂರಿನಲ್ಲಿ ‘ಹೊಸ ಮುಖ’ಗಳಿಗೆ ಬಿಜೆಪಿ ಮಣೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮುಂದಾಗಿರುವ ಬಿಜೆಪಿ ಹೈಕಮಾಂಡ್, ಹೊಸ ಮುಖಗಳಿಗೆ ಮಣೆಹಾಕಿದೆ.

ಇತ್ತೀಚೆಗಷ್ಟೇ ಎಎಪಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಐಪಿಎಸ್ ಭಾಸ್ಕರ್ ರಾವ್ ಅವರಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಭಾಸ್ಕರ್ ರಾವ್ ಅವರು ಕಾಂಗ್ರೆಸ್ ಶಾಸಕ ಬಿ.ಝಡ್ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇವರು ಹೊಸ ಮುಖ ಎನ್ನುವುದು ವಿಶೇಷವಾಗಿದೆ.

ಇನ್ನೂ ಜಯನಗರ ಟಿಕೆಟ್ ಸಿ.ಕೆ ರಾಮಮೂರ್ತಿ ಪಾಲಾಗಿದೆ. ಶಿವಾಜಿನಗರಕ್ಕೆ ಎನ್. ಚಂದ್ರ, ಪುಲಕೇಶಿನಗರಕ್ಕೆ ಮುರಳಿ, ಬ್ಯಾಟರಾಯನಪುರಕ್ಕೆ ತಮ್ಮೇಶ್ ಗೌಡ, ಶಾಂತಿನಗರಕ್ಕೆ ಶಿವಕುಮಾರ್, ಗಾಂಧಿನಗರಕ್ಕೆ ಎ.ಆರ್. ಸಪ್ತಗಿರಿ ಗೌಡ ಅವರಿಗೆ ಈ ಬಾರಿ ಮಣೆ ಹಾಕಲಾಗಿದೆ. ಬಿಟಿಎಂ ಲೇಔಟ್‌ನಿಂದ ಶ್ರೀಧರ ರೆಡ್ಡಿ, ಆನೇಕಲ್‌ನಿಂದ ಹುಲ್ಲಳ್ಳಿ ಶ್ರೀನಿವಾಸ್ ಅವರಿಗೆ ಟಿಕೆಟ್ ಘೋಷಿಸಿದ್ದು, ಇವೆರಲ್ಲಾ ಪ್ರಥಮ ಬಾರಿಗೆ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪ ಬೆನ್ನಲ್ಲೇ ಮತ್ತಿಬ್ಬರು ಸಚಿವರು ರಾಜಕೀಯ ನಿವೃತ್ತಿ?

ಬಿಜೆಪಿ ಪಟ್ಟಿಯಲ್ಲಿ ಯಾರಿಗೆ ಸಿಂಹಪಾಲು

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ 189 ಅಭ್ಯರ್ಥಿಗಳ ಹೆಸರಿದ್ದ ಮೊದಲ ಪಟ್ಟಿಯನ್ನು ಘೋಷಿಸಿದ್ದಾರೆ. ಈ ಪೈಕಿ ಒಬಿಸಿಗೆ 32, ಎಸ್ಸಿಗೆ 30, ಎಸ್ಟಿಗೆ 16 ಸ್ಥಾನ ನೀಡಲಾಗಿದೆ. ಉಳಿದಂತೆ, 52 ಮಂದಿ ಹೊಸಬರಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪೈಕಿ 9 ಮಂದಿ ವೈದ್ಯರು, 8 ಮಹಿಳೆಯರು, 5 ಜನ ವಕೀಲರು, ಮೂವರು ಶಿಕ್ಷಣ ತಜ್ಞರು, ಮೂವರು ನಿವೃತ್ತ ಅಧಿಕಾರಿಗಳು, 8 ಸಾಮಾಜಿಕ ಹೋರಾಟಗಾರರು ಈ ಬಾರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES