Wednesday, January 22, 2025

ಮುಂಬೈಗೆ ಗೆಲುವು : ಅಂಕ ಪಟ್ಟಿಯಲ್ಲಿ ಖಾತೆ ತೆರೆಯುತ್ತಾ ರೋಹಿತ್ ಬಳಗ

ಬೆಂಗಳೂರು : ಇಂದು ಐಪಿಎಲ್ ಕಾದಾಟದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸುತ್ತಿವೆ.

ಈಗಾಗಲೇ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡಿದೆ. ಡೆಲ್ಲಿ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಡೆಲ್ಲಿ ಮತ್ತು ಮುಂಬೈ ತಂಡಗಳು ಈ ಸೀಸನ್‌ನಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಆಡಿದ ಮೂರೂ ಪಂದ್ಯಗಳಲ್ಲಿ ಡೆಲ್ಲಿ ಸೋತಿದ್ದರೆ, ಮುಂಬೈ ಸಹ ಎರಡೂ ಮ್ಯಾಚ್‌ಗಳಲ್ಲಿ ಸೋಲು ಅನುಭವಿಸಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಖಾತೆ ತೆರೆಯಲಿದೆ.

ಇದನ್ನೂ ಓದಿ : ಮೋದಿ ‘ಹೀರೋ’ ಎಂದು ಕೊಂಡಾಡಿದ ಕೆವಿನ್ ಪೀಟರ್ಸನ್

ಮುಂಬೈ ಇಂಡಿಯನ್ಸ್ ತಂಡ

ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮೆರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.

RELATED ARTICLES

Related Articles

TRENDING ARTICLES