Wednesday, January 22, 2025

LGM Movie First Look: ’L.G.M’ ಸಿನಿಮಾದ ಫಸ್ಟ್ ಲುಕ್ ರಿಲೀಸ್​

‘ಲೆಟ್ಸ್​ ಗೆಟ್​ ಮ್ಯಾರೀಡ್​’ (LGM) ಎಂಬ ಶೀರ್ಷಿಕೆಯಡಿಯಲ್ಲಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ (MS Dhoni ) ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಪತ್ನಿ ಸಾಕ್ಷಿ ಜೊತೆಗೂಡಿ ಧೋನಿ ಎಂಟರ್ ಟೈನ್ಮೆಂಟ್ (Dhoni Entertainment Pvt Ltd) ಬ್ಯಾನರ್ ಶುರು ಮಾಡಿರುವ ಎಂ ಎಸ್ ಧೋನಿ  ತಮಿಳು ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈ ಬ್ಯಾನರ್​ಯಡಿಯಲ್ಲಿ ಮೂಡಿಬರ್ತಿರುವ ’L.G.M’ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿದ್ದಾರೆ.

ಇದನ್ನೂ ಓದಿ: ಪ್ಯಾನ್ಸ್ ಗೆ ‘ಏಪ್ರಿಲ್ ಫೂಲ್’ ಮಾಡಿದ ಉರ್ಫಿ ಜಾವೇದ್

ಹೌದು, ಎಲ್​ಜಿಎಂ​’ ಸಿನಿಮಾದ (LGM Movie) ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಎಂ ಎಸ್ ಧೋನಿ ಟಾರ್ಗೆಟ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಂಡಿರುವ ಅವರು ಇಡೀ ತಂಡಕ್ಕೆ ವಿಶ್​ ಮಾಡಿದ್ದಾರೆ. ‘ಎಲ್​ಜಿಎಂ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಮಾಡಲು ಸಂತಸ ಆಗುತ್ತಿದೆ. ನಿಮ್ಮ ಮುಖದಲ್ಲಿ ನಗು ಮೂಡಿಸುವ ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾಗಾಗಿ ಸಿದ್ಧರಾಗಿ. ಇಡೀ ತಂಡಕ್ಕೆ ಆಲ್​ ದ ಬೆಸ್ಟ್​’ ಎಂದು ಎಂಎಸ್​ ಧೋನಿ ಪೋಸ್ಟ್​ ಮಾಡಿದ್ದಾರೆ.

’L.G.M’ ಸಿನಿಮಾಗೆ ವಿಕಾಸ್ ಹಸಿಜಾ ಬಂಡವಾಳ ಹೂಡಿದ್ದಾರೆ. ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿರುವ ಅವರು, ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಪ್ರಿಯಾಂಶು ಚೋಪ್ರಾ, ’L.G.M’ ಹೊಸ ಪರಿಕಲ್ಪನೆಯಾಗಿದೆ. ಅನೇಕ ಸ್ವಾರಸ್ಯಕರ ಅಂಶಗಳು ಚಿತ್ರದಲ್ಲಿವೆ.ಪ್ರತಿಭಾನ್ವಿತ ಚಿತ್ರತಂಡ ಹಾಗೂ ತಾಂತ್ರಿಕ ಬಳಗ ಚಿತ್ರದಲ್ಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ : ‘ಹೊಯ್ಸಳ’ ಟಿಕೆಟ್ ದರದಲ್ಲಿ ಡಿಸ್ಕೌಂಟ್..!

ರಮೇಶ್ ಥಮಿಳ್ಮಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ’L.G.M’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಹರೀಶ್ ಕಲ್ಯಾಣ್, ನದಿಯಾ ಹಾಗೂ ಲವ್ ಟು ಡೇ ಖ್ಯಾತಿಯ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯೋಗಿ ಬಾಬು ಹಾಗೂ ಮಿರ್ಚಿ ವಿಜಯ್ ತಾರಾಬಳಗದಲ್ಲಿದ್ದಾರೆ. ರಮೇಶ್ ಥಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.

RELATED ARTICLES

Related Articles

TRENDING ARTICLES