ಇತ್ತೀಚಿನ ದಿನಮಾನಗಳಲ್ಲಿ ತಡವಾಗಿ ಮಲಗಿ ಲೇಟ್ ಆಗಿ ಏಳೋದು ಒಂದು ಫ್ಯಾಶನ್ ಆಗಿ ಹೋಗಿದೆ. ಇನ್ನೂ ಕೆಲವರು ಬೆಡ್‌ಶೀಟ್ ಹೊದ್ದು ಸುಖವಾಗಿ ಮಲಗಿದರೆ ಗಂಟೆ ಎಂಟಾದರೂ ಗೊತ್ತಾಗದು. ಆದರೆ, ನಾವು ಲೇಟ್ ಆಗಿ ಹೇಳುವುದರಿಂದ ಏನೆಲ್ಲಾ ನಷ್ಟವಾಗುತ್ತಿದೆ. ಆರೋಗ್ಯದ ಮೇಲೆ ಎಂತಹ ಪ್ರಭಾವ ಬೀರುತ್ತದೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ..? ನೀವು ಬೆಳಗ್ಗೆ ಎಂತಹ ಹಿತಾನುಭವನ್ನು ಮಿಸ್ ಮಾಡಿಕೊಳ್ಳತ್ತಿದ್ದರೆ ಎಂಬುದು ನಿಮಗೆ ಗೊತ್ತಿದೆಯೇ..? ಹಾಗಾದ್ರೆ ಬೇಗ ಏಳೋದು ಆರೋಗ್ಯಕ್ಕೆ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ
- ಬೆಳಗ್ಗೆ ಬೇಗ ಏಳುವುದರಿಂದ ನಮಗೆ ವ್ಯಾಯಾಮ ಮಾಡಲು ಸೂಕ್ತ ಪರಿಸರ ಸಿಕ್ಕಿದಂತಾಗುತ್ತದೆ.
- ಹಿತಕರ ವಾತಾವರಣ ಸಿಗುವುದರಿಂದ ನಮ್ಮ ಮನಸ್ಸಿಗೆ ಏಕಗ್ರತೆ ಸಿಗುತ್ತದೆ.
- ಬೆಳಗ್ಗಿನ ಸಮಯ ಕಲಿಕೆಯ ದೃಷ್ಟಿಯಲ್ಲಿ ತುಂಬಾ ಅನುಕೂಲಕರ.
- ನಮ್ಮ ದಿನಚರಿಯನ್ನು ಬೇಗ ಆರಂಭಿಸಿದರೆ ನಮಗೆ ಕೆಲಸ ಮಾಡಲು ಹೆಚ್ಚು ಸಮಯ ಸಿಕ್ಕಂತಾಗುತ್ತದೆ.
- ಬೆಳ್ಳಗ್ಗೆ ಬೇಗ ಏಳುವುದರಿಂದ ಕೆಲಸದ ಒತ್ತಡ ಕಡಿಮೆಯಾಗಿ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ.
- ಬೇಗ ಎದ್ದರೆ ಹೆಚ್ಚು ಎನರ್ಜಿ ಸಿಗುತ್ತದೆ.
- ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳವುದಿಲ್ಲ.
- ಇಷ್ಟು ಓದಿದ ಮೇಲೂ ನೀವು ತಡರಾತ್ರಿವರೆಗೂ ಟೀವಿ ನೋಡುತ್ತಾ ಕಾಲಹರಣ ಮಾಡಿ ದೈಹಿಕ ಆರೋಗ್ಯವನ್ನು ಕಳಕೊಳ್ಳಬೇಕೇ? ರಾತ್ರಿಯ ನಿದ್ರೆಯನ್ನು ಸರಿದೂಗಿಸಲು ಬೆಳಗ್ಗೆ ಲೇಟ್ ಆಗಿ ಏಳೋಬೇಕೇ..?