ಬೆಂಗಳೂರು : ಬಿಜೆಪಿ ಪಟ್ಟಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಬಿಜೆಪಿ ನಾಯಕರು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ದೆಹಲಿ ನಿವಾಸದಲ್ಲಿ ಇದೀಗ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ. ಪಟ್ಟಿ ಹಿಡಿದು ಪ್ರಧಾನಿ ಮೋದಿ ಭೇಟಿಯಾಗಲಿರುವ ಅಮಿತ್ ಶಾ, ಚರ್ಚಿಸಿದ ಬಳಿಕ ಬಿಡುಗಡೆ ಮಾಡಲಿದ್ದಾರೆ. ರಾತ್ರಿ 9 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ಕರೆಯಲಾಗಿದೆ.
ಇದನ್ನೂ ಓದಿ : ಈಶ್ವರಪ್ಪ ನಡ್ಡಾಗೆ ಬರೆದಿರುವ ಪತ್ರದಲ್ಲೇನಿದೆ?: ಹೈಕಮಾಂಡ್ ಮುಂದಿಟ್ಟ ಡಿಮ್ಯಾಂಡ್ ಏನು?
ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಅಳೆದು ತೂಗಿ 150 ಅಭ್ಯರ್ಥಿಗಳ ಲಿಸ್ಟ್ ಫೈನಲ್ ಮಾಡಲಾಗಿದ್ದು, ರಾತ್ರಿ 9 ಗಂಟೆಗೆ ಬಿಜೆಪಿ ಹೈಕಮಾಂಡ್ ಸುದ್ದಿಗೋಷ್ಠಿ ನಡೆಸಲಿದೆ. ಬಿಜೆಪಿ ಹೈಕಮಾಂಡ್ ನಡೆಸುವ ಸುದ್ದಿಗೋಷ್ಠಿಯತ್ತ ರಾಜ್ಯದ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.
ಟಿಕೆಟ್ ವಂಚಿತಗೊಂಡ ಹಿರಿಯ ನಾಯಕರುಗಳು
ಈಶ್ವರಪ್ಪ
ಜಗದೀಶ್ ಶೆಟ್ಟರ್
ಗೋವಿಂದ ಕಾರಜೋಳ
ಬಿ ಸಿ ನಾಗೇಶ್
ವಿಶ್ವೇಶ್ವರ ಹೆಗಡೆ ಕಾಗೇರಿ
ಉದಯ್ ಗರುಡಾಚಾರ್
ಕೆ ಜೆ ಬೋಪಯ್ಯ
ಸಿದ್ದು ಸವದಿ
ದೊಡ್ಡಣ್ಣಗೌಡ ಪಾಟೀಲ
ನಿಂಬಣ್ಣನವರ್
ಅನಿಲ್ ಬೆನೆಕೆ
ಮಾಲೀಕಯ್ಯ ಗುತ್ತೇದಾರ್
ಭ್ರಷ್ಟಾಚಾರ/ಹಗರಣಗಳ ಆರೋಪದಲ್ಲಿ ಟಿಕೆಟ್ ಕಳೆದುಕೊಂಡ ನಾಯಕರು
ನೆಹರು ಓಲೇಕಾರ
ವಿರೂಪಾಕ್ಷ ಮಾಡಾಳ್
ಎಂ ಪಿ ಕುಮಾರಸ್ವಾಮಿ
ಶಶಿಕಲಾ ಜೊಲ್ಲೆ