ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದರೂ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಎರಡು ದಿನಗಳಿಂದಲೂ ದೆಹಲಿಯಲ್ಲಿ ಸಾಲು ಸಾಲು ಸಭೆ ನಡೆದಿದ್ದರೂ, ಮೊದಲ ಪಟ್ಟಿ ಬಿಡುಗಡೆ ಕಗ್ಗಂಟಾಗಿಯೇ ಉಳಿದಿದೆ. ಅಂದ್ರೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೇ ಮೀನಾವೇಷ ಏಣಿಸುತ್ತಿದೆ.
ಇದನ್ನೂ ಓದಿ : ಹಾಸನದಲ್ಲಿ ‘ಮನೆ ಹಾಳು ಮಾಡುವ ಶಕುನಿಗಳು’ ಇದ್ದಾರೆ : ಕುಮಾರಸ್ವಾಮಿ ಕಿಡಿ
ಹೌದು, ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿ ಹೈಕಮಾಂಡ್ ಭಾರೀ ಕಸರತ್ತು ನಡೆಸುತ್ತಿದೆ.ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಮೇಲಿಂದ ಮೇಲೆ ಸರಣಿ ಸಭೆಗಳು ನಡೆಯುತ್ತಿವೆ. ಇನ್ನೂ ಟಿಕೆಟ್ ಫೈನಲ್ ಮಾಡಲು ರಾಜ್ಯ ಬಿಜೆಪಿ ನಾಯಕರು ನವದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.
bJPಗೆ ಕಗ್ಗಂಟಾಗಿರುವ ಕ್ಷೇತ್ರಗಳು ಇವೇನಾ?
ವರುಣಾ, ಕೋಲಾರ, ಶಿವಮೊಗ್ಗ
ಕನಕಗಿರಿ, ಚನ್ನಗಿರಿ, ಹಾವೇರಿ
ರಾಣೇಬೆನ್ನೂರು, ಮಂಡ್ಯ, ಚಿತ್ರದುರ್ಗ
ಧಾರವಾಡ ಗ್ರಾಮೀಣ, ಸವದತ್ತಿ
ಬೆಳಗಾವಿ ಗ್ರಾಮಾಂತರ, ಚಾಮರಾಜನಗರ
ಕೆಜಿಎಫ್, ಆನೇಕಲ್, ಬ್ಯಾಟರಾಯನಪುರ
ಪುತ್ತೂರು, ಸುಳ್ಯ, ವಿರಾಜಪೇಟೆ
ಚಿತ್ತಾಪುರ, ಕುಂದಗೋಳ, ತೇರದಾಳ