Friday, December 27, 2024

ಈ ಸಚಿವರು, ಶಾಸಕರಿಗೆ ಬಿಗ್ ಶಾಕ್ : ಇವರೇ ಟಿಕೆಟ್ ವಂಚಿತ ಕಮಲ ನಾಯಕರು

ಬೆಂಗಳೂರು : 189 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಬಿಜೆಪಿ 9 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಸಚಿವ ಆನಂದ್ ಸಿಂಗ್ ಬದಲಾಗಿ ಅವರ ಮಗನಿಗೆ ಟಿಕೆಟ್ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವ-ಕ್ಷೇತ್ರ ಶಿಗ್ಗಾಂವಿಯಿಂದಲೇ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಟಿಕೆಟ್ ವಂಚಿತರಾದ ಶಾಸಕರ ಹೆಸರು ಇಲ್ಲಿದೆ.

  • ರಘುಪತಿ ಭಟ್ (ಉಡುಪಿ)
  • ಗೂಳಿಹಟ್ಟಿ ಶೇಖರ್ (ಹೊಸದುರ್ಗ)
  • ಯಾದವಾಡ(ರಾಮದುರ್ಗ)
  • ಅನಿಲ್ ಬೆನಕೆ (ಬೆಳಗಾವಿಉತ್ತರ)
  • ಎಸ್. ಅಂಗಾರ (ಸುಳ್ಯ)
  • ಲಾಲಾಜಿ ಮೆಂಡನ್ (ಕಾಪು)
  • ಹಾಲಾಡಿ ಶ್ರೀನಿವಾಸಶೆಟ್ಟಿ (ಕುಂದಾಪುರ)
  • ಆನಂದ್ ಸಿಂಗ್ (ವಿಜಯನಗರ)
  • ಸಂಜೀವ್ ಮಠಂದೂರು (ಪುತ್ತೂರು)

ಇದನ್ನೂ ಓದಿ : ‘ಆ.. ದೇವರು ಬಂದ್ರೂ ನನ್ನ ಮನವೊಲಿಸಲು’ ಸಾಧ್ಯವಿಲ್ಲ : ಸೊಗಡು ಶಿವಣ್ಣ

ಹಿರಿಯರಿಗೂ ಟಿಕೆಟ್

ಈ ಬಾರಿ ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಸಚಿವ ಎಂಟಿಬಿ ನಾಗರಾಜ್, ಶ್ರೀಮಂತ ಪಾಟೀಲ್ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಸುರೇಶ್ ಕುಮಾರ್ ಅವರು ರಾಜಾಜಿನಗರದಿಂದ, ಎಂಟಿಬಿ ನಾಗರಾಜ್ ಹೊಸಕೋಟೆ ಹಾಗೂ ಶ್ರೀಮಂತ ಪಾಟೀಲ್ ಅವರು ಕಾಗವಾಡದಿಂದ ಹಾಗೂ ಕೆಜಿ ಬೋಪಯ್ಯ ವಿರಾಜಪೇಟೆಯಿಂದ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.

RELATED ARTICLES

Related Articles

TRENDING ARTICLES