Thursday, March 28, 2024

Rinku Singh: ರಾತ್ರೋರಾತ್ರಿ ಸ್ಟಾರ್ ಆದ ರಿಂಕು ಸಿಂಗ್ ಎರಡು ದಿನ ಊಟ ಬಿಟ್ಟಿದ್ದು ಯಾಕೆ ಗೊತ್ತಾ..?

ಕ್ರಿಕೆಟ್ ಊರಲ್ಲಿ ಈಗ ಚಾಲ್ತಿಯಲ್ಲಿರುವ ಒಂದೇ ಒಂದು ಹೆಸರು…ಅದು ಸರ್ದಾರ್ ರಿಂಕು ಸಿಂಗ್ (Rinku Singh)..ಸಂಡೇ, ರಿಂಕು ಎಂಬ ಪ್ರತಿಭಾನ್ವಿತ ಹುಡುಗನ ಪಾಲಿಗೆ ಲಕ್ಕಿ ಡೇ ಆಗಿತ್ತು.. ಅದು ಗುಜರಾತ್ ಟೈಟನ್ಸ್ ವರ್ಸಸ್ ಕೆಕೆಆರ್ (KKR VS GT)ನಡುವನ ಪಂದ್ಯ.. ಕೆಕೆಆರ್ ಗೆಲುವಿಗೆ ಕೊನೆಯ 5 ಎಸೆತಗಳಲ್ಲಿ 29 ರನ್ ಬೇಕಿತ್ತು..ಆಗ ಕ್ರೀಸ್​ನಲ್ಲಿ ಇದ್ದದ್ದು ಇದೇ ಸಾಮಾನ್ಯ ಹುಡುಗ ರಿಂಕು ಸಿಂಗ್. ಎಲ್ಲರು ಅಂದುಕೊಡಿದ್ದರು, ಅಯ್ಯೋ ಇದು ಸಾಧ್ಯವೆ ಇಲ್ಲ, ಕೆಕೆಆರ್ ತಂಡ ಸೋಲುತ್ತೆ ಎಂದು. ಆದರೆ ಕೆಲವೊಂದು ಬಾರಿ ಅಸಾಧ್ಯವಾದು ಸಾಧ್ಯವಾಗಿಬಿಡುತ್ತೆ ಅಂತಾರಲ್ಲ, ಅದೇ ನಡೆದು ಹೋಯ್ತು..

ಎಸ್.. ಯಾರು ಏನೇ ಹೇಳಲಿ ನನ್ನ ಆಟ ನಾನು ಆಡುವೆ ಎಂದು ಕ್ರೀಸ್​ನಲ್ಲಿ ಎದೆಯುಬ್ಬಿಸಿ ನಿಂತಿದ್ದ 5 ಅಡಿಯ ಹುಡುಗ ರಿಂಕು ಸಿಂಗ್.. ಸ್ನೇಹಿತರೇ ಏನು ಹೇಳಲಿ, ಹೇಗೆ ವರ್ಣಿಸಲಿ ಅವನ ಆಟವನ್ನ ಮತ್ತು ಧೈರ್ಯವನ್ನ .. ಅದರೆ ಆತನಿಗೆ ಬೇಕಿದ್ದು, ಗೆಲುವಿಗೆ ಬೇಕಾಗಿರುವ 29 ರನ್​ಗಳು ಮಾತ್ರ ಎಲ್ಲರ ಎದೆಬಡಿತ ಜಾಸ್ತಿಯಾಗಿತ್ತು. ಆದರೆ 5 ಎಸೆತಗಳಿಗೆ 5 ಸಿಕ್ಸ್ ಬಾರಿಸಿ ವಿಜಯಪತಾಕೆಯನ್ನ ಹಾರಿಸಿಯೇ ಬಿಟ್ಟ ಈ ಹುಡುಗ… ಈ ಘಟನೆ ಕ್ರಿಕೆಟ್ ಪ್ರೇಮಿಗಳಿಗೆ ಕನಸಾ ಅಥವಾ ನೀಜಾನಾ ಎಂಬಂತಾಗಿತ್ತು..ಇಡೀ ಕ್ರಿಕೆಟ್ ಜಗತ್ತೆ ಎದ್ದುನಿಂತು ರಿಂಕುಗೆ ಚೆಪ್ಪಾಳೆ ತಟ್ಟಿ, ತಲೆ ಬಾಗಿತು..

ಇದನ್ನೂ ಓದಿ: 6,6,6,6,6 ಕೆಕೆಆರ್ ಗೆ ರೋಚಕ ಜಯ

ಆದರೆ ಅವನ ಈ ಸಾಧನೆ ಅಷ್ಟು ಸುಲಭದ್ದಾಗಿರಲಿಲ್ಲ.. ಮತ್ತು ಅವನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ. ಇಂಥಾ ಒಂದು ದಿನಕ್ಕಾಗಿ ರಿಂಕು ಕಾದಿದ್ದು ಒಂದೆರಡು ದಿನಗಳಲ್ಲ. ಬೆಟ್ಟದಷ್ಟು ಪ್ರತಿಭೆ ಇದ್ದರೂ ಒಂದೇ ಒಂದು ಅವಕಾಶಕ್ಕಾಗಿ ಆವನು ಪರಿತಪಿಸಿದ್ದು ಅಷ್ಟಿಷ್ಟಲ್ಲ.. ಅವಕಾಶ ಸಿಗದಾಗ ಅದೇಷ್ಟೋ ರಾತ್ರಿ ಕಣ್ಣುಗಳಿಗೆ ನಿದ್ದೆ ಇಲ್ಲ. ಒಂದು ಕಡೆ ಕಡುಬಡತನ, ಮತ್ತೊಂದು ಕಡೆ ಕ್ರಿಕೆಟ್ ಮೇಲಿನ ವ್ಯಾಮೋಹ.. ಅಯ್ಯೋ ಏನು ಮಾಡಲಿ ನಾನೀಗ ಎಂದು ಹುಚ್ಚನಂತಾಗಿದ್ದ ಈ ರಿಂಕು ಸಿಂಗ್..

ಆದರೆ ದಾರಿ ಕಾಣದೆ ಮಂಕಾಗಿ ಕುತಿದ್ದ ರಿಂಕುಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ್ದು ಮತ್ಯಾರು ಅಲ್ಲ, ಆತನ ಬಡ ತಂದೆ-ತಾಯಿಗಳು… ಅದಕ್ಕೆ ಹೇಳೊದು ಯಾರೇ ಕೈಬಿಟ್ಟರು ತಂದೆ-ತಾಯಿ ಯಾವತ್ತೂ ಕೈಬಿಡುವುದಿಲ್ಲ ಎಂಬ ಮಾತು ಅವನ ಜೀವದಲ್ಲಿ ನಿಜವಾಗಿತು.

ರಿಂಕು ಬಗ್ಗೆ ಇನ್ನೊಂದು ವಿಷಯವನ್ನು ತಿಳಿಯಲ್ಲೇ ಬೇಕು ಈತ ಕ್ರಿಕೆಟ್ ಆಡುವಾಗ ಗಾಯಗೊಂಡು ಮನೆಗೆ ಬಂದಿದ್ದನಂತೆ. ಅದನ್ನ ನೋಡಿದ ಆವನ ಅಪ್ಪ 2 ದಿನಗಳು ಊಟವನ್ನೇ ಬಿಟ್ಟಿದ್ದರಂತೆ.. ಯಾಕೆ ಗೊತ್ತಾ… ಯಾಕಂದ್ರೆ ಇವರ ಕುಟುಂಬ ಆರ್ಥಿಕವಾಗಿ ರಿಂಕು ಸಿಂಗ್ ಒಬ್ಬನನ್ನೇ ಅವಲಂಬಿಸಿತ್ತು. ಹಾಗಾಗಿ ರಿಂಕು ಸಿಂಗ್ ಗಾಯಗೊಂಡು ಕ್ರಿಕೆಟ್ ಆಡದೇ ಇದ್ದಾಗ, ಇದು ಅವರ ಫ್ಯಾಮೀಲಿಗೆ ಸಮಸ್ಯೆಯನ್ನು ತಂದೊಡ್ಡಿತ್ತು. ಇಂತಹ ನೋವಿನ ದಿನಗಳ ಬಗ್ಗೆ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದ ರಿಂಕು ಸಿಂಗ್.
ಸ್ನೇಹಿತರೇ ಇಂತಹ ಅದೇಷ್ಟೋ ಸಮಸ್ಯೆಗಳನ್ನ ಮೆಟ್ಟಿ ನಿಂತು ರಿಂಕು ಸಿಂಗ್ ಇಂದು ಕ್ರಿಕೆಟ್ ಲೋಕದಲ್ಲಿ ಗಟ್ಟಿ ಹೆಜ್ಜೆ ಇಟ್ಟಿದ್ದಾನೆ.. ಅವನ ಜೀವನಗಾಥೆ ಬಹಳಷ್ಟು ಜನರಿಗೆ  ಸ್ಪೂರ್ತಿದಾಯಕ.. ಇದೇ ರೀತಿ ನಮ್ಮ ರಿಂಕು ಇನ್ನಷ್ಟು ಉತ್ತಮ ಆಟವಾಡಿ ಟೀಮ್ ಇಂಡಿಯಾಗು ಲಗ್ಗೆ ಇಟ್ಟು ಯಶಸ್ವಿಯಾಗಲಿ..

 

ಇನ್ನೂ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿ (ಐಪಿಎಲ್) ಆರಂಭವಾದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಬಡ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಕ್ರಿಕೆಟ್‌ ವೃತ್ತಿ ಜೀವನವನ್ನು ಅಂತಾರಾಷ್ಟ್ರೀಯ ಮಟ್ಟದವರೆಗೂ ವಿಸ್ತರಿಸಿಕೊಂಡಿರುವ ಹಲವು ಕ್ರಿಕೆಟಿಗರು ನಮ್ಮ ಕಣ್ಣ ಮುಂದೆ ಇದ್ದಾರೆ.

 

 

 

RELATED ARTICLES

Related Articles

TRENDING ARTICLES