Wednesday, October 30, 2024

IPL 2023 : ಆರ್​ಸಿಬಿ-ಲಖನೌ ಇಂದು ಮುಖಾಮುಖಿ

ಬೆಂಗಳೂರು : 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯದಲ್ಲಿ ಆರ್​ಸಿಬಿ ವರ್ಸಸ್ ಲಖನೌ ಸೂಪರ್ ಜೇಂಟ್ಸ್ (RCB vs LSG) ಮುಖಾಮುಖಿಯಾಗಲಿದ್ದಾರೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswami Stadium) ಈ ಪಂದ್ಯವನ್ನು ಆಯೋಜಿಸಲಾಗಿದ್ದು ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.  ಹೌದು IPL 2023ರ 14ನೇ ಪಂದ್ಯಗಳು ಮುಕ್ತಾಯಗೊಂಡಿದೆ. ಇಂದು ನಡೆಯಲಿರುವ 15ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್  ನಾಯಕ್ವದಲ್ಲಿ RCB ಮತ್ತು LSG ಪಂದ್ಯ ನಡೆಯಲಿದೆ.

ಹೌದು, ಇಂದುವರಿಗೂ RCB ಎರಡು ಪಂದ್ಯಗಳನ್ನ ಆಡಿ ಮೊದಲ ಮ್ಯಾಚ್​ನಲ್ಲಿ ಗೆದ್ದು ಎರಡನೇ ಮ್ಯಾಚ್​ನಲ್ಲಿ ಸೋತಿದೆ. ಇನ್ನೂ ಇತ್ತ  ಲಖನೌ ಸೂಪರ್ ಜೇಂಟ್ಸ್ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಕೇವಲ ಒಂದು ಪಂದ್ಯದಲ್ಲಷ್ಟೆ ಸೋಲು ಕಂಡಿದೆ.

ಆರ್​ಸಿಬಿ ತಂಡದಲ್ಲಿ : ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಶಹಬಾಜ್ ಅಹಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲಿ, ವೇಯ್ನ್ ಪಾರ್ನೆಲ್, ಹಿಮಾಂಶು ಶರ್ಮಾ, ಮನೋಜ್ ಬಾಂಢಗೆ, ರಾಜನ್‌ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮಿಚೆಲ್ ಬ್ರೇಸ್‌ವೆಲ್.

ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ : ಕೆಎಲ್ ರಾಹುಲ್ (ನಾಯಕ), ಖೈಲ್ ಮೇಯರ್ಸ್, ದೀಪಕ್ ಹೂಡಾ, ಕ್ರುನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯಿನಿಸ್, ನಿಕೋಲಸ್ ಪೂರನ್,, ಆಯುಷ್ ಬದೋನಿ, ಮಾರ್ಕ್ ವುಡ್, ಜಯದೇವ್ ಉನಾದ್ಕಟ್, ರವಿ ಬಿಷ್ಣೋಯ್, ಅವೇಶ್ ಖಾನ್, ಕೃಷ್ಣಪ್ಪ ಗೌತಮ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ರೊಮಾರಿಯೋ ಶೆಫರ್ಡ್, ಯುದ್ವೀರ್ ಸಿಂಗ್ ಚರಕ್, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರಾ.

ಇನ್ನೂ ಇಂದಿನ ಪಂದ್ಯದಲ್ಲಿ ಯಾರಿಗೆ ಜಯ ಯಾರಿಗೆ ಸೋಲು ಎಂಬುವುದನ್ನು ಕಾದು ನೋಡಬೇಕಿದೆ

ಪಂದ್ಯ ಆರಂಭ: ಸಂಜೆ 7:30ಕ್ಕೆ

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

 

 

 

 

RELATED ARTICLES

Related Articles

TRENDING ARTICLES