Friday, May 17, 2024

Cholesterol : ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಶ್ವಾಶತ ಪರಿಹಾರ 

ನಿಮ್ಮ ದೇಹದ ಈ ಭಾಗಗಳಲ್ಲಿ ಅತಿಯಾಗಿ ನೋವು ಬರ್ತಿದ್ರೆ, ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.. ನಿಮ್ಮಲ್ಲಿ ಅಧಿಕ ಕೊಲೆಸ್ಟ್ರಾಲ್‌ ಉಂಟಗುತ್ತಿದೆ ಅದ್ರೆ ಅದು ಹೃದಯಘಾತಕ್ಕೂ ಕಾರಣ ಆಗಬಹುದು…ಇದರಿಂದ ಪಾರಾಗಲು ನೀವು ಈ ಲೇಖನ ಪೂರ್ತಿ ಓದಿ .

ಇದನ್ನೂ ಓದಿ : Benefits of Meditation : ನಿತ್ಯ ಬೆಳಗ್ಗೆ ಎದ್ದು ಧ್ಯಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಹೌದು … Bad Cholesterol ಎನ್ನುವುದು ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದ ದುಷ್ಟರಿಣಾಮವಾಗಿ ಹಲವರನ್ನು ಕಾಡುತ್ತಲೆ ಇರುತ್ತೆ. ಅದಕ್ಕೆ, ಕಾರಣ ನಿಯಮಿತ ಆಹಾರ ಸೇವನೆ ಮಾಡದಿರುವುದು, ಹೆಚ್ಚು ಜಂಕ್‌ ಫುಡ್‌ ಸೇವನೆ, ಸಮ ಪ್ರಮಾಣದ ನೀರು ಕುಡಿಯದೆ ಇರುವುದು, ದೈಹಿಕ ಚಟುವಟಿಕೆ ಕಡಿಮೆ ಇರುವುದು, ಅತಿಯಾದ ಆಲೋಷನೆ ಇವು ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಲು ಕಾರಣವಾಗುತ್ತೆ.

ಕೊಲೆಸ್ಟ್ರಾಲ್​ನಿಂದ ಮೊದಲು ಕಾಡುವ ಸಮಸ್ಸೆ ಎದೆ ನೋವು 

ಈ ಕೊಲೆಸ್ಟ್ರಾಲ್ ಒಂದು ಮೇಣದಂಥ ವಸ್ತು. ಇದು ರಕ್ತದಲ್ಲಿ ಕಂಡುಬರುತ್ತದೆ ಮತ್ತು ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕೊಲೆಸ್ಟ್ರಾಲ್‌ನ ಅತಿಯಾದ ಹೆಚ್ಚಳದಿಂದಾಗಿ, ಹೃದಯಾಘಾತದ ಅಪಾಯವು ಸುಳಿದಾಡಲು ಪ್ರಾರಂಭಿಸುತ್ತದೆ. ಅಧಿಕ ಕೊಲೆಸ್ಟ್ರಾಲ್‌ನಿಂದಾಗಿ, ಅಪಧಮನಿಗಳ ಸುಗಮ ರಕ್ತದ ಹರಿವಿಗೆ ತೊಂದರೆಯುಂಟಾಗುತ್ತೆ. ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗಿದ್ದರೆ, ಎದೆ ನೋವಿನ ಸಮಸ್ಯೆ ಬರಬಹುದು. ಅಧಿಕ ಪ್ರಮಾಣದ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಕಾರಣವಾಗಬಹುದು.

ಕಾಲು ನೋವಿನ ಸಮಸ್ಯೆ 

ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ, ಕಾಲುಗಳ ಅಪಧಮನಿಗಳಿಗೆ ರಕ್ತದ ಹರಿವಿನಲ್ಲಿ ಅಡಚಣೆಯಾಗುತ್ತದೆ. ಇದರಿಂದ ಪಾದಗಳಿಗೆ ಸರಿಯಾಗಿ ರಕ್ತ ಸಂಚಾರವಿರುವುದಿಲ್ಲ, ಇದರಿಂದ ನಡೆಯಲು ತೊಂದರೆಯುಂಟಾಗುತ್ತೆ, ಪಾದಗಳಲ್ಲಿ ನೋವು, ಪಾದದ ಚರ್ಮದ ಬಣ್ಣ ಬದಲಾದಂತೆ ಕಾಣಿಸಬಹುದು. ಇದಲ್ಲದೆ, ಕೆಲವರಿಗೆ ಪಾದಗಳು ಅತಿಯಾಗಿ ತಣ್ಣಗಾಗುವ ಅನುಭವವಾಗುತ್ತೆ.

ಯಾರಿಗೆ ಹೈ ಕೊಲೆಸ್ಟ್ರಾಲ್ನಿಂದ ಅಧಿಕ ಅಪಾಯವಿರುತ್ತೆ

*ಅಧಿಕ ಕೊಲೆಸ್ಟ್ರಾಲ್‌ ಸಮಸ್ಯೆಯು ಸಾಮಾನ್ಯವಾಗಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಹಾಗೂ ಜಂಕ್ ಫುಡ್‌ ಹೆಚ್ಚಿನ ಸೇವನೆ ಮಾಡುವವರಲ್ಲಿ ಕಂಡುಬರುತ್ತದೆ.

*ಪ್ಯಾಕೇಜ್ ಮಾಡಿದ ವಸ್ತುಗಳ ಅತಿಯಾದ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹಕ್ಕೆ ಕಾರಣವಾಗಬಹುದು.

*ಯಾವುದೇ ರೀತಿಯ ದೈಹಿಕ ಚಟುವಟಿಯಲ್ಲಿ ತೊಡಗದೆ ಇರುವುದು , ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಬೊಜ್ಜು ಹೆಚ್ಚಾಗಲು ಕಾರಣವಾಗಿದೆ.

*ಧೂಮಪಾನ ಮಾಡುವುದು ಮತ್ತು ಆಲ್ಕೋಹಾಲ್ ಸೇವಿಸುವ ಜನರಲ್ಲಿಯೂ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಂಡುಬರುತ್ತದೆ.

ಜೀವನಶೈಲಿ ಬದಲಾವಣೆ ತಂದುಕೊಂಡರೆ ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಚಾವ್‌ ಆಗಬಹುದು.

RELATED ARTICLES

Related Articles

TRENDING ARTICLES