ಹಾಸನ : ರಾಜ್ಯದ ಹಾಲು ಮಾರುಕಟ್ಟೆ ಅಮುಲ್ (Amul ) ಕಂಪನಿಗೆ ರಾಜ್ಯ ಸರ್ಕಾರ ನೆರವು ನೀಡುತ್ತಿದೆ. ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಇನ್ನೂ ಸಾರ್ವಜನಿಕರು ಸೇವ್ ಕೆ.ಎಂ.ಎಫ್ ( save KMF) ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಕೂಡ ಶುರು ಮಾಡಿದ್ದಾರೆ. ಇವೆಲ್ಲಾದರ ನಡುವೆ ಈಗ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹಾಸನದ (Hassan) ಕೆಎಂಎಫ್ ನಂದಿನಿ ಹಾಲಿನ ಕೇಂದ್ರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: DK Shivakumar : ನನ್ನ ವಿರುದ್ಧ ಸ್ಪರ್ಧೆ ಮಾಡುವುದಾದರೇ ಆರ್.ಅಶೋಕ್ಗೆ ಸ್ವಾಗತ
ಹೌದು, ಡಿಕೆ ಶಿವಮಕುಮಾರ್ ಹಾಲು, ತುಪ್ಪ, ಮಜ್ಜಿಗೆ, ಮೈಸೂರು ಪಾಕ್ ಸೇರಿ ಎರಡೂವರೆ ಸಾವಿರ ಮೌಲ್ಯದ ನಂದಿನಿ ಉತ್ಪನ್ನ ಖರೀದಿಸಿದ್ದಾರೆ. ನಂತರ ಅವುಗಳನ್ನು ಸ್ಥಳದಲ್ಲಿದ್ದವರಿಗೆ ಹಂಚಿದ್ದಾರೆ. ಬಳಿಕ ಮಾತನಾಡಿದ ಅವರು ನಂದಿನಿ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಾಗೇ ಕರ್ನಾಟಕದ ಹಾಲು ಉತ್ಪಾದಕರ ಪ್ರಶ್ನೆಯಾಗಿದೆ. ನಂದಿನಿ ಉಳಿಸಿಕೊಳ್ಳೋದು ಕರ್ನಾಟಕ ರೈತರ ಬದುಕಿನ ಪ್ರಶ್ನೆಯಾಗಿದೆ ಎಂದರು.
ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು
ಕೆಎಂಎಫ್ ಹಾಲು ಒಕ್ಕೂಟಕ್ಕೆ ಸುಮಾರು 80 ಲಕ್ಷ ರೈತರು ಹಾಲು ಉತ್ಪಾದನೆಗೆ ಹಾಲು ಹಾಕುತ್ತಾರೆ, ರೈತರು ಕಟ್ಟಿದ ನಂದಿನಿ ಇದು. ಲೀಟರ್ ಗೆ 27-28 ರೂ ಕೊಡುತ್ತಾರೆ. ಸರ್ಕಾರ 5 ರೂ. ಸಹಾಯಧನ ಕೊಡುತ್ತಿದೆ. ಅಮುಲ್ ಗುಜರಾತ್ನದ್ದು, ಅದು ಕೂಡ ರೈತರದ್ದು ನಮ್ಮದೇನು ತಕರಾರಿಲ್ಲ. ಆದರೆ ನಮ್ಮನ್ನು ಹಿಂದಕ್ಕೆ ಹಾಕಿ, ಅದನ್ನು ಮುಂದೆ ಮಾಡುತ್ತಿರೋದು ಸರ್ಕಾರದ ಕ್ರಮ ಸರಿಯಿಲ್ಲ. ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು ಎಂದು ಹೇಳಿದರು.
ಹಾಲು ಉತ್ಪಾದನೆಗೆ ಪ್ರೊತ್ಸಾಹ ನೀಡಬೇಕು
ನಮ್ಮ ರೈತರು ಬೆಲೆ ಏರಿಕೆ ನಡುವೆ ಹಾಲು ಉತ್ಪಾದನೆ ಮಾಡುತ್ತಾರೆ ಅವರಿಗೆ ಸರ್ಕಾರ ಏನೂ ಸಹಾಯ ಮಾಡಿಲ್ಲ. ನಮ್ಮ ಹಾಲನ್ನೇ ಮಾರಾಟ ಮಾಡಲು ಅಗುತ್ತಿಲ್ಲ. ಹಾಗಾಗಿ ನಾವೇ ಪ್ರೊತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಬೇಕು. ಹಾಲಿನ ಉತ್ಪನ್ನಗಳಾದ ಮೈಸೂರು ಪಾಕ್, ಪೆಡಾ, ಬಿಸ್ಕೆಟ್ ,ಚಾಕಲೇಟ್ನ್ನು ಪಕ್ಷದ ಅಧ್ಯಕ್ಷನಾಗಿ ಖರೀದಿ ಮಾಡಿದ್ದೇನೆ. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು, ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಪ್ಪುಗೆ ಬಿಜೆಪಿ ಕೋಡೋ ಮಾರ್ಯದೆ ಇದೆನಾ..?
ನಂದಿನಿ ಹಾಲಿಗೆ ಪ್ರಚಾರಕರಾಗಿದ್ದವರು ದಿವಂಗತ ನಟ ಡಾ ರಾಜ್ಕುಮಾರ್. ಬಳಿಕ ದಿವಂಗತ ನಟ ಪುನೀತ್ ರಾಜಕುಮಾರ ಅವರು ಆಗಿದ್ದರು. ಸರ್ಕಾರ ರಾಜ್ಕುಮಾರ್ ಪುನೀತ್ ರಾಜ್ಕುಮಾರ್ ಅವರನ್ನು ಕೆಎಂಎಫ್ನ ರಾಯಭಾರಿ ಮಾಡಿದ್ದರು. ರಾಜ್ಕುಮಾರ್ ಅವರು ಇಂದು ಇಲ್ಲದೆ ಇಲ್ಲದಿರಬಹುದು, ಪುನೀತ್ ರಾಜ್ಕುಮಾರ್ ಇಲ್ಲದಿರಬಹುದು, ಆದರೆ ಅವರು ರಾಜ್ಯಕ್ಕೆ ಮಾಡಿದ ಸೇವೆ ಏನು ಎಂದು ಎಲ್ಲರಿಗೆ ಗೊತ್ತಿದೆ. ರೈತರು ಬದುಕಬೇಕು ಅಂತಾ ರಾಯಭಾರಿ ಆಗಿ ಕೆಲಸ ಮಾಡಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.