ಬೆಂಗಳೂರು : ಡಿ.ಕೆ ಸುರೇಶ್ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಸಚಿವ ಮುನಿರತ್ನ ಆರೋಪಕ್ಕೆ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನರನ್ನು ನಾನು ಯಾಕೆ ಟಾರ್ಗೆಟ್ ಮಾಡಲಿ. ಅವರಿಗೆ ಏನು ಆಗಿದೆಯೋ ಗೊತ್ತಿಲ್ಲ, ಭ್ರಮೆಯಲ್ಲಿ ಇದ್ದಾರೆ. ನಾನು ಎಲ್ಲಾ ಕಡೆ ಕೆಲಸ ಮಾಡುತ್ತಿದ್ದೇನೆ, ಅದು ಅವರಿಗೆ ಕಾಣುತ್ತಿಲ್ಲ ಎಂದು ಕುಟುಕಿದ್ದಾರೆ.
ಇನ್ನೂ ಖರ್ಗೆ ರಾಜ್ಯ ರಾಜಕಾರಣ ಪ್ರವೇಶ ಹಾಗೂ ಸಿಎಂ ಆದ್ರೆ ಅವರ ಜೊತೆಗೆ ಸಂತೋಷದಿಂದ ಕೆಲಸ ಮಾಡುತ್ತೇನೆ ಎಂಬ ಸಹೋದರ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಬರಬಾರದು ಅಂತೇನು ಇಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಏನು ಉತ್ತರ ಕೋಡಬೇಕೋ ಅದನ್ನು ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ವರಿಷ್ಠರಾಗಿದ್ದಾರೆ. ಹೈಕಮಾಂಡ್ ಆದೇಶ ಪಾಲನೆ ಮಾಡುತ್ತೇವೆ ಎಂದು ಡಿ.ಕೆ ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ಸಚಿವ ಮುನಿರತ್ನ ಕಾಲಿಟ್ಟಲ್ಲೆಲ್ಲಾ ಕಮಿಷನ್ ದಂಧೆ ನಡೀತಿದ್ಯಾ?
ಇಲಿಗಳು ಒಳ ನುಸುಳ್ತಿವೆ
ನಾವು ಚುನಾವಣೆ ಸಂದರ್ಭದಲ್ಲಿದ್ದೇವೆ. ರಾಜಕಾರಣದ ಕಡೆ ಎಲ್ಲರ ಗಮನ ಇರುತ್ತೆ. ಆದರೆ ಈಗ ಇಲಿಗಳು ಬೇರೆ ಬೇರೆ ಕಡೆ ಒಳ ನುಸುಳ್ತಿವೆ. ಕರ್ನಾಟಕ, ಕನ್ನಡದ ರೈತರಿಗೆ ಬೆಲೆಯಿದೆ. ಇಡೀ ವಿಶ್ವದಲ್ಲಿಯೇ ಗೌರವ ಸ್ಥಾನವಿದೆ. ಪ್ರವೇಟ್ ಸೆಕ್ಟರ್ ಹೊಂದಿದ್ದ ರಾಜ್ಯ ಕರ್ನಾಟಕ, ಬ್ಯಾಂಕಿಂಗ್ ಸೆಕ್ಟರ್ ಕೂಡ ಇಲ್ಲಿಂದಲೇ ಇದ್ದಿದ್ದು. ಸಿಂಡಿಕೇಟ್, ಕೆನರಾ, ಕರ್ನಾಟಕ ಬ್ಯಾಂಕ್ ಇಲ್ಲಿಯವು. ಸಹಕಾರ ಬ್ಯಾಂಕ್, ಕೃಷಿ ಸಹಕಾರ ಸಂಘ ಬಂದಿದ್ದು ಇಲ್ಲೇ. ಕರ್ನಾಟಕ ಮಹಾಮಂಡಳಿಗೆ ತನ್ನದೇ ಆದ ಹೆಸರಿದೆ ಎಂದು ತಿಳಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದೇವೆ. ಕೋಪರೇಟಿವ್ ಸೊಸೈಟಿ ರೈತರಿಗೆ ಸುಲಭ ಸಾಲ ಸಿಗಲಿದೆ. ದಿನನಿತ್ಯದ ರೈತನ ಬದುಕು ಇಲ್ಲಿಂದಲೇ ನಡೆಯಬೇಕು. ಕೃಷಿ ಜೊತೆ ಇನ್ನಿತರ ಉತ್ಪನ್ನಗಳು ಇಲ್ಲಿಂದಲೇ ನಡೆಯುತ್ತೆ. ೨೮ ಲಕ್ಷ ರೈತ ಕುಟುಂಬಗಳು ಕ್ರೀರ ಕ್ಷೇತ್ರದಲ್ಲಿವೆ. ಇದನ್ನೇ ನಂಬಿ ಬದುಕುತ್ತಿವೆ. ಪ್ರತಿ ೧೫ ದಿನಕ್ಕೆ ಇದ್ರಿಂದ ಆದಾಯ ತಲುಪುತ್ತಿದೆ. ಇದು ಆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.