Wednesday, January 22, 2025

ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ : ಜನಪ್ರತಿನಿಧಿಗಳ ಸ್ವಾಗತಕ್ಕೆ ನಿರ್ಬಂಧ

ಬೆಂಗಳೂರು : ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಇಂದು ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಪ್ರಾದೇಶಿಕ ಆಯುಕ್ತ ಡಾ.ಪ್ರಕಾಶ್, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಅಧಿಕಾರಿಗಳು ಸ್ವಾಗತ ಕೋರಿದ್ದಾರೆ. ನೀತಿ ಸಂಹಿತೆ ಜಾರಿ ಹಿನ್ನಲೆ ಜನಪ್ರತಿನಿಧಿಗಳ ಸ್ವಾಗತಕ್ಕೆ ನಿರ್ಬಂಧ ವಿಧಿಸಲಾಗಿದೆ.

ನಾಳೆ ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ ನಡೆಸಲಿರುವ ಪ್ರಧಾನಿ ಮೋದಿ, ಅಲ್ಲಿಂದ ನೀಲಗಿರಿಯಲ್ಲಿರುವ ಆನೆ ಶಿಬಿರಕ್ಕೆ ತೆರಳಲಿದ್ದಾರೆ. ನಂತರ ಬಂಡೀಪುರ ಹುಲಿ ಯೋಜನೆಯ 50 ವರ್ಷದ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಮೋದಿ ‘ವಿಶ್ವದ ಅತ್ಯಂತ ಶಕ್ತಿಶಾಲಿ’ ಲೀಡರ್

ಮೋದಿ ನಾಳೆಯ ಪ್ರವಾಸ

  • ಬೆಳಗ್ಗೆ 6.20ಕ್ಕೆ ಮೈಸೂರಿನಿಂದ ಮೇಲುಕಾಮನಹಳ್ಳಿಗೆ ಪ್ರಯಾಣ
  • ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ, ಸಪಾರಿ ನಡೆಸಲಿರುವ ಮೋದಿ
  • ಬೆಳಗ್ಗೆ 7.15ರಿಂದ 9.30ರವರೆಗೆ ಬಂಡೀಪುರದಲ್ಲಿ ಸಪಾರಿ
  • ಬೆಳಗ್ಗೆ 9.45ಕ್ಕೆ ತೆಪ್ಪಕಾಡು ಆನೆ ಕ್ಯಾಂಪ್​ನಲ್ಲಿ ಬೊಮ್ಮಾಯಿಯಿಂದ ಸನ್ಮಾನ
  • ಬೆಳಗ್ಗೆ 10.20ಕ್ಕೆ ತೆಪ್ಪಕಾಡಿನಿಂದ ಮೈಸೂರಿನತ್ತ ‘ನಮೋ’ ಪ್ರಯಾಣ
  • ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮನ
  • ಬೆಳಗ್ಗೆ 10.30ಕ್ಕೆ ಹುಲಿ ಯೋಜನೆ 50ನೇ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ
  • ಮಧ್ಯಾಹ್ನ 12.30ಕ್ಕೆ ಹೆಲಿಕಾಪ್ಟರ್​ನಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
  • ಮಧ್ಯಾಹ್ನ 12.40ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ

RELATED ARTICLES

Related Articles

TRENDING ARTICLES