ಬೆಂಗಳೂರು : ತವರು ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಮುಖಭಂಗವಾಗಿದ್ದು, ರೋಹಿತ್ ಪಡೆ ವಿರುದ್ಧ ಧೋನಿ ಬಳಗ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
158 ರನ್‌ಗಳ ಸುಲಭ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಚೆನ್ನೈ ಪರ ಅಜಿಂಕ್ಯ ರಹಾನೆ 27 ಎಸೆತಗಳಲ್ಲಿ 61 ರನ್ (3 ಸಿಕ್ಸ್, 7 ಫೋರ್) ಸಿಡಿಸಿದ, ಮುಂಬೈ ಗೆಲುವಿಗೆ ವಿಲನ್ ಆದರು.
ಋತುರಾಜ್ ಗಾಯಕ್ವಾಡ್ ಅಜೇಯ 40*, ಶಿವಂ ದುಬೆ 28, ಅಂಬಟಿ ರಾಯುಡು ಅಜೇಯ 20* ಸಿಡಿಸಿದರು. ಇದಕ್ಕೂ ಮೊದಲು 3 ವಿಕೆಟ್ ಪಡೆದ ಜಡೇಜಾ ಬೌಲಿಂಗ್‌ನಲ್ಲಿ ಮಿಂಚಿದರು. ಅಂಕಪಟ್ಟಿಯಲ್ಲಿ ಚೆನ್ನೈ 4ನೇ ಸ್ಥಾನಕ್ಕೆ ಜಿಗಿದರೆ, ಮುಂಬೈ ಇನ್ನೂ ಖಾತೆಯನ್ನೇ ತೆರೆದಿಲ್ಲ.
Match 12. Chennai Super Kings Won by 7 Wicket(s) https://t.co/rSxD0lf5zJ #TATAIPL #MIvCSK #IPL2023
— IndianPremierLeague (@IPL) April 8, 2023
19 ಎಸೆತಗಳಲ್ಲಿ ಅರ್ಧಶತಕ
ಅಜಿಂಕ್ಯ ರಹಾನೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಬೌಲಿಂಗ್ ಉಡೀಸ್ ಆಯಿತು. ಕೇವಲ 19 ಎಸೆತಗಳಲ್ಲಿ ರಹಾನೆ ಅರ್ಧಶತಕ ಪೂರೈಸಿದರು. ವಿಶೇಷ ಎಂದರೆ ಇದು ಈ ಬಾರಿಯ ಐಪಿಎಲ್ನ ಅತ್ಯಂತ ವೇಗದ ಅರ್ಧಶತಕವಾಗಿದೆ. ರಹಾನೆಗೂ ಮೊದಲು ಜೋಸ್ ಬಟ್ಲರ್ ಹಾಗೂ ಶಾರ್ದೂಲ್ ಠಾಕೂರ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.