Monday, December 23, 2024

ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಸ್ಫೋಟ : ಇವರೇ ರೆಬೆಲ್ ನಾಯಕರು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸರಣಿ ಸಭೆ ಬಳಿಕ ಅಳೆದು ತೂಗಿ ಪಕ್ಕಾ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪ್ರಕಟ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ಬುಡಮೇಲು ಆಗಿದ್ದು, ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ.

ಹೌದು, ಎರಡನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‍ಗೆ ಬಂಡಾಯದ ಶಾಕ್ ಎದುರಾಗಿದೆ. ಪಕ್ಷದ ವಿರುದ್ಧವೇ ಟಿಕೆಟ್ ವಂಚಿತರು ಸಿಡಿದೆದ್ದಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಗುರುವಾರ 42 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಘೋಷಣೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಟಿಕೆಟ್ ತಮಗೇ ಸಿಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಹಿನ್ನಡೆಯಾಗಿದೆ. ಹೀಗಾಗಿ, ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ ಮತ್ತೊಂದು ದೊಡ್ಡ ವಿಕೆಟ್ ಪತನ : ಶೀಘ್ರ ಜೆಡಿಎಸ್ ಸೇರ್ಪಡೆ

ಎರಡನೇ ಪಟ್ಟಿಯಲ್ಲಿ ಟಿಕೆಟ್ ಸಿಗದ ಕಾರಣ ಕೆಲವರು ಅಸಮಾಧಾನ ಹೊರಹಾಕಿದ್ದರೆ, ಇನ್ನೂ ಹಲವರು ರೆಬಲ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಸೇರಲು ಬಯಸಿದ್ದಾರೆ. ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೂ ಸಿದ್ಧರಾಗಿದ್ದಾರೆ. ಕೆಲವರಿಗೆ ಈಗಾಗಲೇ ಜೆಡಿಎಸ್ ಪಕ್ಷ ಗಾಳ ಹಾಕಿದೆ.

ಎಲ್ಲೆಲ್ಲಿ ಕಾಂಗ್ರೆಸ್ ಬಂಡಾಯ

  • ಬೀಳಗಿ-ಬಸವಪ್ರಭು ಸರನಾಡಗೌಡ
  • ಗಂಗಾವತಿ-ಶ್ರೀನಾಥ್ಚ
  • ನ್ನಗಿರಿ-ವಡ್ನಾಳ್ ರಾಜಣ್ಣ
  • ಕಲಘಟಗಿ-ನಾಗರಾಜ್ ಛಬ್ಬಿ
  • ಕಡೂರು-ವೈಎಸ್ಎ ದತ್ತಾ
  • ಚಿತ್ರದುರ್ಗ-ರಘು ಆಚಾರ್ಕಿ
  • ತ್ತೂರು-ಬಿ.ವಿ ಇನಾಂದರ್
  • ಮಂಡ್ಯ-ಕೆ.ಕೆ ರಾಧಾಕೃಷ್ಣ
  • ಧಾರಾವಾಡ-ಇಸ್ಮಾಯಿಲ್‌ ತಮಟಗಾರ
  • ತೀರ್ಥಹಳ್ಳಿ-ಮಂಜುನಾಥ್ ಗೌಡ
  • ತುಮಕೂರು-ಡಾ.ರಫೀಕ್ ಅಹ್ಮದ್
  • ಕುಣಿಗಲ್- ರಾಮಸ್ವಾಮಿ ಗೌಡ

RELATED ARTICLES

Related Articles

TRENDING ARTICLES