Monday, December 23, 2024

‘ಸಿದ್ದು’ ಮತ್ತೆ ‘ಸಿಎಂ’ ಆಗಬೇಕು : ಅಯ್ಯಪ್ಪನ ಮೊರೆ ಹೋದ ಅಭಿಮಾನಿ

ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ದು ಅಭಿಮಾನಿಯೋರ್ವ ದೇವರ ಮೊರೆ ಹೋಗಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿಯಾದ ಗುರುಮಣಿಕಂಠ ಅಯ್ಯಪ್ಪ ಮಾಲೆ ಧರಿಸಿ ದೇವರ ಮೊರೆ ಹೋಗಿದ್ದಾರೆ. ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಿದ್ದು ಸಿಎಂ ಆಗಬೇಕೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಮತ್ತೆ ಪ್ರಚಂಡ ಬಹುಮತದಿಂದ ಗೆದ್ದು ಮತ್ತೆ ರಾಜ್ಯದಲ್ಲಿ ಸಿಎಂ ಆಗಬೇಕು, ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮತ್ತೆ ಶಾಸಕ ಆಗಬೇಕು ಎಂದು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : RCB ನನ್ನ ಹೆಮ್ಮೆಯ ತಂಡ, ‘ನಮ್ಮವರೂ ಕಪ್ ಗೆಲ್ಲುತ್ತಾರೆ’ : ಸಿದ್ದರಾಮಯ್ಯ

ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಭಾವ ಚಿತ್ರ ಹೀಡಿದು ಅಯ್ಯಪ್ಪ ಸ್ವಾಮಿ ಮೊರೆ ಹೋಗಲಾಗಿದ್ದು, ಇರುಮುಡಿ ಕಟ್ಟಿ ನಂತರ ಅಷ್ಟಾಭೀಷಕ, ಪುಷ್ಪ ಅಭಿಷೇಕ ಪೂಜೆ ಮಾಡಿಸಲಾಗಿದೆ.

ಶಾಸಕ ಶರಣಬಸಪ್ಪ ದರ್ಶನಾಪುರ ಪವರ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್​​ನಲ್ಲಿ ಸಿಕ್ಕಿಬಿದ್ದಿದ್ದರು. ಶಾಸಕರು ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಲಂಚ ಪಡೆದಿದ್ದ ದೃಶ್ಯ ಪವರ್ ಟಿವಿಯಲ್ಲಿ ಪ್ರಸಾರವಾಗಿತ್ತು.

RELATED ARTICLES

Related Articles

TRENDING ARTICLES