Wednesday, January 22, 2025

ಬಿಜೆಪಿ ಪರ ಪ್ರಚಾರದಲ್ಲಿ ‘ತೆಲುಗು ಸ್ಟಾರ್’ : ಆ.. ‘ಪವರ್’ ಫುಲ್ ನಟನ ಆಯ್ಕೆ ಯಾಕೆ?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡಿದೆ. ಇತ್ತ, ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಹಂತದಲ್ಲಿದೆ. ಮತ್ತೊಂದೆಡೆ, ರಾಜ್ಯ ಚುನಾವಣಾ ಪ್ರಚಾರಕ್ಕೆ ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದು, ತೆಲುಗಿನ ಸ್ಟಾರ್ ನಟನನ್ನು ಪ್ರಚಾರಕ್ಕೆ ಕರೆತರುತ್ತಿದ್ದಾರೆ.

ಹೌದು, ರಾಜ್ಯ ಬಿಜೆಪಿ ಪರ ಪ್ರಚಾರ ಮಾಡಲು ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಜ್ಜಾಗಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಜನಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ಪವನ್ ಕಲ್ಯಾಣ್ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದು ಕೇವಲ ತೆಲುಗು ನೆಲಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದಲ್ಲೂ ಅಸಂಖ್ಯಾತ ಪ್ಯಾನ್ ಫಾಲೋಯಿಂಗ್ ಇರುವ ನಟ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ಬಿಜೆಪಿ ಪವರ್ ಸ್ಟಾರ್ ಗೆ ಗಾಳ ಹಾಕಿದೆ.

ಇದನ್ನೂ ಓದಿ : ಸಿಎಂ ಆಗೋವರೆಗೂ ‘ಡಿಕೆಶಿ ಗಡ್ಡ’ ತೆಗೆಯಲ್ವಂತೆ

ಪವನ್ ಕಲ್ಯಾಣ್ ಅವರು ತೆಲುಗು ಭಾಷೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ. ಆಂಧ್ರಪ್ರದೇಶ ಗಡಿ ಭಾಗದ ಕ್ಷೇತ್ರ ಹಾಗೂ ರಾಜ್ಯ ರಾಜಧಾನಿಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪವರ್ ಅಬ್ಬರದ ಪ್ರಚಾರ ಮಾಡಲಿದ್ದಾರೆ.

ಮಾಹಿತಿ ಪ್ರಕಾರ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನ ಕೆಲ ಭಾಗಗಳು ಮತ್ತು ರಾಜಧಾನಿ ಬೆಂಗಳೂರಿನ ಕೆಲವು ಕಡೆ ಪವನ್ ಕಲ್ಯಾಣ್ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES