Sunday, December 22, 2024

ದಾಖಲೆ ಬರೆಯುವ ಹೊಸ್ತಿಲಿನಲ್ಲಿ ‘ತಲಾ ಧೋನಿ’ : ಬೇಕಿರುವುದು ಕೇವಲ 8 ರನ್!

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ. ಈ ಹೆಸರಿನ ಹಿಂದೆ ಅದೆಷ್ಟೋ ದಾಖಲೆಗಳು ಇತಿಹಾಸ ಪುಟ ಸೇರಿವೆ. ಟೆಸ್ಟ್, ಏಕದಿನ, ಟಿ-20 ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಧೋನಿ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ನಾಯಕನಾಗಿ, ಆಟಗಾರನಾಗಿ, ವಿಕೆಟ್ ಕೀಪರ್ ಆಗಿ ಧೋನಿ ನಿರ್ಮಿಸಿರುವ ದಾಖಲೆಗಳು ಒಂದೆರಡಲ್ಲ. ಇದೀಗ, ಐಪಿಎಲ್ ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

ಹೌದು, ಇಂದು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್‌ ಜೈಂಟ್ಸ್ ನಡುವೆ ಪಂದ್ಯ ನಡೆಯಲಿದೆ. ಚೈನ್ನೈ (ಸಿಎಸ್‌ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ 5,000 ರನ್ ಪೂರೈಸಿದ 7ನೇ ಬ್ಯಾಟರ್ ಗೌರವಕ್ಕೆ ಭಾಜನರಾಗಲಿದ್ದಾರೆ.

ಎಂ.ಎಸ್ ಧೋನಿ 235 ಪಂದ್ಯಗಳ 207 ಇನ್ನಿಂಗ್ಸ್ ಗಳಲ್ಲಿ 4992 ರನ್ ಗಳಿಸಿದ್ದಾರೆ. ಇಂದು ಲಕ್ನೋ (ಎಲ್‌ಎಸ್‌ಜಿ) ವಿರುದ್ಧ 8 ರನ್ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ 5,000 ರನ್ ಗಳಿಸಿದ 7ನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ 6,706 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಚೆನ್ಮೈ (ಸಿಎಸ್‌ಕೆ) ಪರ 5000 ರನ್ ಪೂರೈಸಿದ ಎರಡನೇ ಆಟಗಾರ ಧೋನಿ ಆಗಲಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಚೆನ್ನೈ

ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಪಂದ್ಯದಲ್ಲಿ ಸೋಲಿನ ಬಳಿಕ ಪುಟಿದೇಳುವ ತವಕದಲ್ಲಿದೆ. ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ಲಖನೌ ಸೂಪರ್‌ ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. ತವರು ಅಂಗಳ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ಗೆಲುವಿನ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಕೆ.ಎಲ್‌.ರಾಹುಲ್ ನೇತೃತ್ವದ ಲಖನೌ ಗೆಲುವಿನ ನಾಗಲೋಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ : Viral Video: ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಸಂಭ್ರಮವೋ.. ಸಂಭ್ರಮ

ಚೆನ್ನೈ ಸೂಪರ್ ಕಿಂಗ್ಸ್ ತಂಡ:

ಎಂ.ಎಸ್ ಧೋನಿ (ನಾಯಕ), ಡೆವೋನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಮಿಚೆಲ್ ಸ್ಯಾಂಟನರ್, ದೀಪಕ್ ಚಹರ್, ಆರ್‌ಎಸ್ ಹಂಗರ್ಗೇಕರ್

ಲಖನೌ ಸೂಪರ್ ಜೈಂಟ್ಸ್ ತಂಡ:

ಕೆ.ಎಲ್ ರಾಹುಲ್ (ನಾಯಕ), ಖೈಲ್ ಮೇಯರ್ಸ್, ದೀಪಕ್ ಹೂಡಾ, ಕ್ರುನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯಿನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಮಾರ್ಕ್ ವುಡ್, ಜಯದೇವ್ ಉನಾದ್ಕಟ್, ರವಿ ಬಿಷ್ಣೋಯ್, ಅವೇಶ್ ಖಾನ್

RELATED ARTICLES

Related Articles

TRENDING ARTICLES