Sunday, December 22, 2024

3 ಪ್ರಾಜೆಕ್ಟ್ ಗಳ ಬಿಗ್ ಅಪ್ಡೇಟ್ ಕೊಟ್ಟ ಕಿಚ್ಚ : ಮೊದಲು ಯಾರಿಗೆ ಡೇಟ್ಸ್ ಕೊಡ್ತಾರೆ?

ಬೆಂಗಳೂರು : ಕಿಚ್ಚ ಸುದೀಪ್ ವಿಕ್ರಾಂತ್ ರೋಣ ನಂತರ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಬಿಗ್ ಬಾಸ್ ಶೋ, ಬಳಿಕ ಸಿಸಿಎಲ್ ನಲ್ಲಿ ಬ್ಯುಸಿ ಆಗಿದ್ದ ಕಿಚ್ಚನೂ ಸೈಲೆಂಟ್ ಆಗಿದ್ದರು. ಆದರೆ, ಈಗ ಪ್ಯಾನ್ಸ್ ಗೆ ಸಡನ್ ಆಗಿ ಸರ್​ಪ್ರೈಸ್ ಕೊಟ್ಟಿದ್ದಾರೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಪ್ರಾಜೆಕ್ಟ್​​ಗಳ ಬಗ್ಗೆ ಕಿಚ್ಚ ಅಪ್ಡೇಟ್ಸ್ ಕೊಟ್ಟಿದ್ದಾರೆ.

ಹೌದು, ವಿಕ್ರಾಂತ್ ರೋಣ ಸಿನಿಮಾ ಬಳಿಕ ಯಾವುದೇ ಸಿನಿಮಾನ ಅನೌನ್ಸ್ ಮಾಡದೆ ಸೈಲೆಂಟ್ ಆಗಿಬಿದ್ದ ಸುದೀಪ್ ಇದೀಗ ಮೌನ ಮುರಿದಿದ್ದಾರೆ. ನೆಚ್ಚಿನ ನಟನ ಮುಂದಿನ ಸಿನಿಮಾ ಯಾವುದಾಗಲಿದೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಅದರಿಂದ ಅಭಿಮಾನಿಗಳ ಜೊತೆ ಕಿಚ್ಚ ಕೂಡ ಬೇಜಾರಾಗಿದ್ದರು. ಇದೀಗ ಬಹು ನಿರೀಕ್ಷಿತ ಕಿಚ್ಚನ 46ನೇ ಸಿನಿಮಾ ಯಾವುದಾಗಲಿದೆ ಅನ್ನೋದನ್ನು ಸ್ವತಃ ಸುದೀಪ್ ಅವರೇ  ಹೇಳಿದ್ದಾರೆ. ಅಭಿಮಾನಿಗಳ ಟ್ವೀಟ್ಸ್ ಹಾಗೂ ನೆಟ್ಟಿಗರ ಮೀಮ್ಸ್​ಗೆ ಒಂದು ಡಿಟೈಲ್ಡ್ ಲೆಟರ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ಕ್ರಿಕೆಟ್ ನಂಗೆ ಬಹಳ ಖುಷಿ ಕೊಡುತ್ತೆ

ನನ್ನೆಲ್ಲಾ ಸ್ನೇಹಿತರಿಗೆ ನಮಸ್ಕಾರ ಎಂದಿರೋ ಕಿಚ್ಚ, ಕಿಚ್ಚ 46 ಕುರಿತರು ನೀವೆಲ್ಲಾ ಇಟ್ಟಿರೋ ಪ್ರೀತಿ ನನಗೆ ಅರ್ಥವಾಗುತ್ತೆ. ಕೋವಿಡ್ ಮತ್ತು ಬಿಗ್​ಬಾಸ್ ನಿಂದಾಗಿ ಬ್ರೇಕ್ ತೆಗೆದುಕೊಳ್ಳಬೇಕಾಯ್ತು. ಈ ಬ್ರೇಕ್​ನಲ್ಲಿ ನಾನು ನನಗೆ ಖುಷಿ ಕೊಡುವ ಕಾರ್ಯಗಳನ್ನು ಮಾಡುತ್ತಿದ್ದೆ. ಕ್ರಿಕೆಟ್ ನಂಗೆ ಬಹಳ ಖುಷಿ ಕೊಡುತ್ತೆ. ಹಾಗಾಗಿಯೇ ಅಲ್ಲಿ ತೊಡಗಿಸಿಕೊಂಡೆ ಎಂದು ಹೇಳಿದ್ದಾರೆ.

ಆದರೂ ಕಥೆಗಳ ಚರ್ಚೆ ಪ್ರತೀ ದಿನ ನಡೆಯುತ್ತಿತ್ತು. ಮೂರು ಸ್ಕ್ರಿಪ್ಟ್​ಗಳನ್ನ ಫೈನಲ್ ಮಾಡಿದ್ದೇನೆ. ಮೂರೂ ಚಿತ್ರಗಳಿಗೂ ಸಿಕ್ಕಾಪಟ್ಟೆ ಹೋಮ್​ವರ್ಕ್​ ಮಾಡಬೇಕಾಗಿದೆ. ಅದಕ್ಕಾಗಿ ಟೀಂಗಳು ಹಗಲಿರುಳು ಶ್ರಮಿಸುತ್ತಿವೆ. ಸದ್ಯದಲ್ಲೇ ಅಧಿಕೃತವಾಗಿ ಅವುಗಳನ್ನು ಅನೌನ್ಸ್ ಮಾಡ್ತೀವಿ. ತುಂಬಾ ಪ್ರೀತಿ ಮತ್ತು ಅಪ್ಪುಗೆಗಳೊಂದಿಗೆ ನಿಮ್ಮ ಕಿಚ್ಚ ಎಂದು ಪತ್ರ ಬರೆದಿದ್ದಾರೆ.

ಅನೂಪ್ ಭಂಡಾರಿ, ವೆಂಕಟ್ ಪ್ರಭು ಜೊತೆ ಒಂದು ಸಿನಿಮಾ ಹಾಗೂ ಕಬಾಲಿ ನಿರ್ಮಾಪಕ ಕಲೈಪುಲಿ ಎಸ್ ತನು ಜೊತೆ ಸಿನಿಮಾ ಮಾತುಕತೆ ಆಗಿದೆ ಎನ್ನಲಾಗಿದೆ. ಈ ಮೂವರಲ್ಲಿ ಕಿಚ್ಚ ಮೊದಲು ಯಾರಿಗೆ ಡೇಟ್ಸ್ ಕೊಡ್ತಾರೆ ಅನ್ನೋದು ಗೊತ್ತಿಲ್ಲ. ಈ ಬಾರಿ ಕಿಚ್ಚ ಯಾವ ಬಿಗ್ ಪ್ರಾಜೆಕ್ಟ್ ​ನೊಂದೊಗೆ ಅಖಾಡಕ್ಕೆ ಇಳಿಯಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES