ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ರಾಜ್ಯದ ಜನತೆ ಬಿಜೆಪಿ ಕೈ ಹಿಡಿತಾರೆ. ಮುಂದಿನ 5 ವರ್ಷ ಅಧಿಕಾರ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಕೊಡುವ ಬೆಳೆ ಪರಿಹಾರಕ್ಕೆ ಎರಡು ಪಟ್ಟು ಕೊಟ್ಟಿದ್ದು ನಮ್ಮ ಸರ್ಕಾರ. ನಮ್ಮದು ಜನರ ಸಮಸ್ಯೆಗೆ ಧಾವಿಸುವ ಸರ್ಕಾರ. ನಾವು ಮಾಡಿರುವ ಕೆಲಸದ ರಿಪೋರ್ಟ್ ಕಾರ್ಡ್ ಇಟ್ಟು ಮತ ಕೇಳುತ್ತೇವೆ ಎಂದು ಹೇಳಿದ್ದಾರೆ.
‘ಕೈ‘ಯಿಂದ ಧರ್ಮ ಒಡೆಯುವ ಕೆಲಸ
ಕಾಂಗ್ರೆಸ್ ಕಾಲದಲ್ಲಿ ಧರ್ಮ ಒಡೆಯುವ ಕೆಲಸ ಆಗಿದೆ. ನಾವು ಜೋಡಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಕಾಲದಲ್ಲಿ ಅತೀ ಹೆಚ್ಚು ಕೊಮುಗಲಭೆ ನೋಡಿದ್ದೇನೆ. ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿತ್ತು. ಇದೀಗ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರದ ಇದ್ದಾಗ 50 ಹೆಚ್ಚು ಸ್ಕ್ಯಾಂಡಲ್ ಆಗಿತ್ತು. ಆದರೆ, ಎಲ್ಲದಕ್ಕೂ ಬಿ ರಿಪೋರ್ಟ್ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ‘ನನ್ನ ನಂಬಿ ಬಂದವರಿಗೆ ಅನ್ಯಾಯ’ ಮಾಡ್ಬೇಡಿ : ಯಡಿಯೂರಪ್ಪ
ನಿಮ್ಮ ಹತ್ತಿರ ಸಾಕ್ಷಿ ಇದ್ರೆ ಕೊಡಿ
ಭ್ರಷ್ಟಾಚಾರ ವಿಚಾರದಲ್ಲಿ ಹೊಂದಾಣಿಕೆ ಇಲ್ಲ. 40% ಪರ್ಷಂಟೇಜ್ ಅಂತ ಹೇಳಿದ್ರು. ಒಂದು ಕಂಪ್ಲೇಂಟ್ ಕೊಡಿ ಅಂದ್ರೆ ಕೊಡ್ಲಿಲ್ಲ. ಯಾಕೆಂದರೆ ಆರೋಪಕ್ಕೆ ಅವರ ಬಳಿ ಸಾಕ್ಷಿ ಇಲ್ಲ. ಇವತ್ತು ಹೇಳ್ತೀನಿ, ಸಾಕ್ಷಿ ಇದ್ರೆ ಕೊಡಿ. ದುಡಿಯುವ ವರ್ಗ ನಮ್ಮನ್ನು ‘ಬಿಜೆಪಿ ಭರವಸೆ’ ಅಂತ ನೋಡ್ತಿದ್ದಾರೆ. ಮುಂದಿನ 5 ವರ್ಷ ಮೋದಿ ಆಡಳಿತ ಮೆಚ್ಚಿ ನಮ್ಮ ಕೈ ಹಿಡಿತಾರೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರದಲ್ಲಿ ಉದ್ಯೋಗದ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. 13 ಲಕ್ಷ ಉದ್ಯೋಗ ಕ್ರಿಯೇಟ್ ಮಾಡಿದ್ದೇವೆ. ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದ್ದು ಕರ್ನಾಟಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.